ಈ ಮೆದುಳು 24 ಗಂಟೆ, 365 ದಿನ, ನೀವು ಹುಟ್ಟಿ ಲವ್ವಿಗೆ ಬೀಳುವ ವರೆಗೂ ಕೆಲಸ ಮಾಡುತ್ತಲೇ ಇರುತ್ತದೆ.
ಕೀಬೋರ್ಡ್‌ನಲ್ಲಿ 'ಕೀ' ಕಾಣಬಹುದು. ಆದರೆ, ಮದರ್‌ಬೋರ್ಡ್‌ನಲ್ಲಿ 'ಮದರ್' ಅನ್ನು ಕಾಣೋದಿಕ್ಕಾಗಲ್ಲ.
ನೀವು ಸ್ಟಡಿ ಮಾಡಿದ್ರೆ ಯಾವ ಸರ್ಟಿಫಿಕೇಟ್ ಬೇಕಾದ್ರೂ ಸಿಗುತ್ತೆ... ಡೆತ್ ಸರ್ಟಿಫಿಕೇಟೊಂದನ್ನು ಬಿಟ್ಟು.
ಮನಃಶ್ಶಾಸ್ತ್ರಜ್ಞರ ಬಳಿ ಹೋಗುವವರು ಹೆಚ್ಚಾಗಿ ಮದುವೆಯಾದವರೇ ಅಂತೆ.
ಜೋಕ್ಸ್‌ಪಿಯರ್
ಮುಖ್ಯಮಂತ್ರಿ: ಯಾಕೋ ಈಗೀಗ ನನಗೆ ಸಿಕ್ಕಾಪಟ್ಟೆ ಬಿಕ್ಕಳಿಕೆ ಬರ್ತಿದೆ. ಯಾರೋ ನನ್ನ ಪದೇಪದೇ ನೆನೆಸ್ಕೊಳ್ತಾ ಇದ್ದಾರೆ.
ಸೆಕ್ರೆಟರಿ: ಹೌದು ಸರ್, ನೀವು ಪವರ್‌ಕಟ್ ಅನ್ನು ನಿಲ್ಲಿಸುವ ವರೆಗೂ ನಿಮ್ಮ ಬಿಕ್ಕಳಿಕೆ ನಿಲ್ಲೋದಿಲ್ಲ.
=
ಕೋಲ್ಯಿಣಿ: ನಿನ್ ಜತೆ ಮದ್ವೆ ಆಗೋದ್ಕಿಂತ ರಾಕ್ಷಸನ ಜತೆ ಮದ್ವೆ ಆಗಿದ್ರೂ ನಾನು ಸುಖವಾಗಿರ್ತಿದ್ದೆ.
ಕೋಲ್ಯ: ರಕ್ತಸಂಬಂಧಿಗಳೊಂದಿಗೆ ಮದ್ವೆ ಆಗ್ಬಾರ್ದು ಅಂತ ಗೊತ್ತಿಲ್ವೇನೇ!?
=
ತಪ್ಪಾಯ್ತು ಸರ್...
ಟ್ರಾಫಿಕ್ ಪೊಲೀಸ್: ನಿನ್ನ ಹೆಸರು ಹೇಳು.
ಈತ: ತಪ್ಪಾಯ್ತು ಸರ್.
ಪೊಲೀಸ್: ನಿನ್ನ ಹೆಸರು ಹೇಳಯ್ಯಾ...
ಈತ: ಸರ್ ಇನ್ನೊಂದ್ ಸಾರಿ ಮಾಡಲ್ಲ ಸರ್.
ಪೊಲೀಸ್: (ಸಿಟ್ಟಿನಲ್ಲಿ) ಬೇಗ ನನ್ಗೆ ಲೇಟ್ ಆಗ್ತಿದೆ. ಮುಚ್ಕೊಂಡ್ ಹೇಸರೇಳು?
ಈತ: ತಿರುಕುಲವಟ್ಟೈ ತೆಕ್ಕಡೆಪರಂಬ್ಲೈ ವೆಂಕಟೇಶ್ವರ ಸ್ವಾಮಿ.
ಪೊಲೀಸ್: (ರಶೀದಿ ಹರಿಯದೆ, ಕೈಮುಗಿದು) ದಯವಿಟ್ಟು ಇನ್ನೊಂದ್ ಸಲ ಈ ಥರ ರೂಲ್ಸ್ ಮುರೀಬೇಡಪ್ಪ. ನಡಿ...
=
ಎಂಜಿನಿಯರ್: ನನ್ನ ಹತ್ರ ಡಿಗ್ರಿ ಇದೆ, ಸ್ಕಿಲ್ಸ್ ಇದೆ, ಟೆಕ್ನಿಕಲಿ ತುಂಬಾ ನಾಲೆಡ್ಜ್ ಇದೆ. ನಿನ್ಹತ್ರ ಏನಿದೆ?
ಸೆಕ್ಯುರಿಟಿ ಗಾರ್ಡ್: ಕೆಲ್ಸ ಇದೆ.
=
ಇಬ್ಬರು ಎಂಜಿನಿಯರ್‌ಗಳ ನಡುವಿನ ಸಂಭಾಷಣೆ...
ಮೊದಲನೆಯವ: ನಾನು ಕೋರಮಂಗಲಕ್ಕೆ ಶಿಫ್ಟ್ ಆದೆ.
ಎರಡನೆಯವ: ರೈಟ್ ಶಿಫ್ಟಾ, ಲೆಫ್ಟ್ ಶಿಫ್ಟಾ?
----------
ನಿಶ್ಶಬ್ದಕೋಶ
ಪ್ರಾಮಾಣಿಕತೆ: ಬಸ್ಸಿನಲ್ಲಿ ಗರ್ಭಿಣಿ ಎರಡು ಟಿಕೆಟ್ ಮಾಡಿಸುವುದು.
ಸಿಗರೇಟು: ಕೈಗೆ ಸಿಗದ ರೇಟಿಗೆ ತಲುಪಿರುವ ಹೊಗೆ ಪೈಪು.
ಆ್ಯಂಬ್ಯುಲೆನ್ಸ್: ತುಂಬಾ ಸೀರಿಯಸ್ ವ್ಯಕ್ತಿಗಳಿಗಷ್ಟೇ ಡ್ರಾಪ್ ಕೊಡುವ ವಾಹನ.
ಭಾವಚಿತ್ರ: ಪಾರ್ಥೀವ ಶರೀರದ ನಕಲು.
ಹರಿದಕೋಟು
ನಾನು ಸುಂದರಿ, ಆದರೆ ಅತಿಸುಂದರಿ ಅಲ್ಲ; ನಾನು ಪಾಪಿ, ಆದರೆ ಪಿಶಾಚಿ ಅಲ್ಲ; ನಾನು ಸಭ್ಯಸ್ಥೆ, ಆದರೆ ದೇವತೆ ಅಲ್ಲ.
- ಮರ್ಲಿನ್ ಮನ್ರೋ