ಭಗವಂತ ನಮ್ಮನ್ನು ಗಮನಿಸ್ತಾ ಇದ್ದಾನೆ ಎಂದರೆ ನಾವೆಂಥ ಮನರಂಜನೆ ವಸ್ತು!?
ಸುನಾಮಿ ಆಗುತ್ತದೆ, ಅಗ್ನಿಪರ್ವತ ಸ್ಫೋಟಿಸುತ್ತದೆ, ಮದ್ವೆಯೂ ಆಗುತ್ತದೆ... ಪ್ರಕೃತಿ ವಿಕೋಪವನ್ನು ತಡೆಯೋರು ಯಾರು?
ಹುಡುಗಿಯ ಟಿಶರ್ಟ್ ಮೇಲಿನ ಬರಹ ಹೀಗಿತ್ತು, 'ಎಕ್ಸ್ ಕ್ಯೂಸ್ ಮಿ, ನನ್ನ ಫೇಸ್ ಮೇಲಿದೆ!'.
ಮಳೆಗೆ ಹುಲ್ಲು, ಹೂವು.... ಎಲ್ಲವನ್ನೂ ಸುಂದರಗೊಳಿಸುವ ಶಕ್ತಿಯಿದೆ. ಯಾಕೆ ಅದು ನಿನ್ನ ಮೇಲೂ ಸುರಿಯಬಾರದು?
ನಿಮಗೆ ಆಗದೇ ಇರುವವರಿಗೆ ಸಾವಿರ ರುಪಾಯಿ ಸಾಲ ಕೊಟ್ಟುಬಿಡಿ, ಮತ್ತೆಂದೂ ನಿಮ್ಮ ಬಳಿ ಸುಳಿಯೋದಿಲ್ಲ.
ಚೆಸ್ನಲ್ಲಿ ಕಂಪ್ಯೂಟರ್ ಅನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲವೇ? ಡೋಂಟ್ ವರಿ, ರಿಯಲ್ ಬಾಕ್ಸಿಂಗೇ ಆಡಿಬಿಡಿ!
ಸಾಕುನಾಯಿ ನಿಮ್ಮನ್ನು ನೋಡಿ ಬೊಗಳುತ್ತಿಲ್ಲವೆಂದರೆ, ಬಹುಶಃ 'ಒಡಹುಟ್ಟಿದವರು' ಎಂದು ಭಾವಿಸಿರಬಹುದು. <