ಘ್ನಾನಪೀಠ

Updated on: 

ಫ್ಯಾಷನ್ ಡಿಸೈನರ್ ಮಧು, ಹಾಸನ
    ನಾನು ಬೆಳ್ಳಗಿದ್ದರೂ ಅವಳು 'ಕರಿಯ ಐ ಲವ್ ಯೂ' ಅಂತಾಳಲ್ಲ?
    -ಇನ್ಮೇಲೆ ಬ್ಲ್ಯಾಕ್ ಕಲರ್ ಬಟ್ಟೆನೇ ಡಿಸೈನ್ ಮಾಡಿ ಹಾಕ್ಕೊಳ್ಳಿ!

ಉಜ್ಜನಿ ಜಲೇಂದ್ರ, ಪಾಂಡವಪುರ
    ಡಬಲ್ ಸಿಮ್ ಹೊಂದಿದವರಿಗೂ, ಡಬ್ಬಲ್ ಹೆಂಡತಿಯರನ್ನು ಹೊಂದಿದವರಿಗೂ ಏನು ವ್ಯತ್ಯಾಸ?
    -ಡಬಲ್ ಸಿಮ್ ಒಂದೇ ಮೊಬೈಲ್‌ನಲ್ಲಿರುತ್ತೆ, ಡಬಲ್ ಹೆಂಡತಿಯರು ಒಂದೇ ಮನೇಲಿರೋಕ್ಕಾಗೋಲ್ಲ!

ವಿ. ಹೇಮಂತಕುಮಾರ್, ಬೆಂಗಳೂರು
    ನರಿ, ಹಂದಿ, ಕತ್ತೆಗಳನ್ನೇಕೆ ಚುನಾವಣಾ ಚೆನ್ಹೆಯಾಗಿ ಬಳಸುವುದಿಲ್ಲ?
    - ಅವರೇ ಚುನಾವಣೆಗೆ ನಿಂತಿರ್ತಾರಲ್ಲ!

ರವಿಕಮಾರ್ ಜಿ.ಬಿ., ಬೆಂಗಳೂರು
    ತಮಿಳುನಾಡಿಗೆ ನಮ್ಮ ಸರ್ಕಾರ ಕಾವೇರಿ ನೀರು ಕೊಡ್ತು, ಅಕ್ಕಿನೂ ಕೊಡ್ತು, ಮುಂದೆ ಏನು ಕೊಡುತ್ತೆ?
    -ಅನ್ನ ಬೇಯಿಸಲು ಗ್ಯಾಸ್ ಕೊಡಬಹುದು!

ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
    ನಗುವಿಗೆ ಮುಪ್ಪು ಬರುವಂತಿದ್ದರೆ?
    -ಮುಪ್ಪಾದವರೆಲ್ಲ ನಗುತ್ತಲೇ ಇರಲಿಲ್ಲ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
    ಮನೆಕಟ್ಟಲು ಗುದ್ದಲಿಪೂಜೆ, ಮದುವೆ ಮಾಡಲು?
    -ಮೊದಲು 'ವರಪೂಜೆ', ಮದುವೆ ನಂತರ ಹೆಂಡತಿಯಿಂದ 'ಮಂಗಳಾರತಿ'!

ಬರ್ಕ್‌ಲಿ ರಮೇಶ್ ಕಿರಗಂದೂರು, ಮಂಡ್ಯ
     ತಾಯಿ ತಂದೆ ಮೊದಲ ಗುರುಗಳಾದರೆ, ಹೆಂಡತಿ?
-ಟ್ಯೂಷನ್ ಟೀಚರ್!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
 ಕುಡುಕರೇಕೆ ಕುಡಿದಾಗಲೇ ಸತ್ಯ ಹೇಳ್ತಾರೆ?
-ಅವರು ಆ 'ಬ್ರ್ಯಾಂಡ್‌'ನ ಅಂಬಾಸಿಡರ್ ಆಗಿರ್ತಾರೆ!


-ಘಾಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com