ಟೀ: ಕಾಫಿ ಒಗ್ಗದೇ ಇರುವವರು ಸೇವಿಸುವ ಪೇಯ.
ಗುಡುಗು: ಬೈಗುಳದ ಮಳೆ ಬೀಳುವ ಮುನ್ನ ಹೆಂಡತಿ ಸೃಷ್ಟಿಸುವ ಭಯಾನಕ ಸದ್ದು.
ಕರಾಟೆ: ಬೆಲ್ಟು ಕಟ್ಟಿಕೊಂಡವರಿಗೆಲ್ಲ ಬರುವಂಥ ಕಲೆಯಲ್ಲ.
ಕಾರ್ಡು: ಜೂಜುಕೋರನ ಕೈಯಲ್ಲೂ ಇರುತ್ತೆ, ಪೋಸ್ಟ್‌ಮ್ಯಾನ್‌ನ ಕೈಯಲ್ಲೂ ಇರುತ್ತೆ.
ಕಡಲೆ: 'ಕಡ' ಮಾಡಿ ಮಾಡಿ, ತೋಪೆದ್ದು ಹೋದ ಬಳಿಕ ತಿನ್ನಬೇಕಾದ ಬೀಜ.
ಸೂರ್ಯ: ತಮಿಳಿನ ಖ್ಯಾತ ಚಿತ್ರನಟ.
ಜೇನು: ಮರದ ಮೇಲಿರುವ, ಕೈಗೆಟುಕದ ಸಿಹಿತುಪ್ಪ.
ಕಿಲಾಡಿ: ಹಾಗೆ ಬಿಟ್ಟರೆ, ಲಂಗದ ಲಾಡಿಯನ್ನೂ ಎಳೆಯುವ ಡೇಂಜರ್ ವ್ಯಕ್ತಿ.
ಮುಕ್ತಿ: ಟಿ.ಎನ್. ಸೀತಾರಾಮ್ ಅವರ ಪತ್ನಿ ತೆಗೆಯಬಹುದಾದ ಧಾರಾವಾಹಿ.