2113ನೇ ಇಸವಿಯ ಒಂದು ದಿನ.
ಕೋಲ್ಯ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದೇ ಜಗತ್ತಿನಾದ್ಯಂತ ಸುದ್ದಿಯಾಯ್ತು. ಎಂಥ ಸುದೀರ್ಘ ದಾಂಪತ್ಯ!? ಎಂಬ ಹೆಡ್ಲೈನ್ಗಳು, ಬ್ರೇಕಿಂಗ್ನ್ಯೂಸ್ಗಳು ವಿಶ್ವದ ಎಲ್ಲ ಭಾಷೆಯ ಚಾನೆಲ್ಗಳಲ್ಲೂ ಹರಿದಾಡಿದವು. ಈ ನಡುವೆ 'ಕನ್ನಡಪ್ರಭ'ದ ವರದಿಗಾರನಿಗೆ ಕೋಲ್ಯನ ಎಕ್ಸ್ಕ್ಲ್ಯೂಸಿವ್ ಸಂದರ್ಶನಕ್ಕೆ ಅವಕಾಶ ಸಿಕ್ಕಿತು.
ಪತ್ರಕರ್ತ: ನಿಮ್ಮ ಸುದೀರ್ಘ ದಾಂಪತ್ಯದ ಗುಟ್ಟೇನು?
ಕೋಲ್ಯ: ಏನೂ ಇಲ್ಲ. ಮದ್ವೆಯಾದ ಶುರುವಿನಲ್ಲಿ ಶಿಮ್ಲಾಕ್ಕೆ ಹನಿಮೂನಿಗೆಂದು ಹೋಗಿದ್ದೆವು. ನನ್ನಾಕೆಗೆ ಕುದುರೆ ಓಡಿಸುವ ಹುಚ್ಚಿದ್ದರಿಂದ ಅಲ್ಲೇ ಇದ್ದ ಪ್ರೈವೇಟ್ ರೇಸ್ಕೋರ್ಸ್ಗೆ ಹೋದೆವು. ನಾನು ಬೇಡ ಎಂದರೂ ಕೇಳದೆ, ಒಂದು ಕುದುರೆಯನ್ನು ತಾನೇ ಓಡಿಸುವುದಾಗಿ ಹಠ ಹಿಡಿದಳು. ಅಂತೂ ನಾನು ಒಪ್ಪಿಯೇಬಿಟ್ಟೆ. ಆ ಬಿಳಿ ಕುದುರೆ ಒಮ್ಮೆ ಅವಳನ್ನು ಕೆಳಗೆ ಬೀಳಿಸಿತು. ಆಗ ಅವಳು ಕುದುರೆ, 'ಬ್ಯಾಡ ನೋಡು, ಇದು ನಿನ್ಗೆ ಫಸ್ಟ್ ವಾರ್ನಿಂಗ್' ಎಂದು ಗದರಿಸಿ ಮತ್ತೆ ಏರಿದಳು. ಆದರೆ, ಅದು ಪುನಃ ಅವಳನ್ನು ಕೆಳಗೆ ಬೀಳಿಸಿತು. ಆಕೆಗೆ ಸಿಟ್ಟು ಬಂದು, ಜೇಬಿನಲ್ಲಿದ್ದ ರಿವಾಲ್ವರ್ನಿಂದ ಕುದುರೆಯ ತಲೆಗೆ ಗುರಿಯಿಟ್ಟು ಕೊಂದಳು.
ಇದರಿಂದ ನನಗೆ ಬೇಜಾರಾಯಿತು. ಅವಳಿಗೆ ಹೇಳಿದೆ, 'ಬಡಪಾಯಿ ಪ್ರಾಣಿಯನ್ನು ಕೊಂದ್ಯಲ್ಲ. ಛೇ, ನೀ ಹಾಗೆ ಮಾಡ್ಬಾರ್ದಿತ್ತು'. ಅದಕ್ಕವಳು ನನಗೆ, 'ಬ್ಯಾಡ ನೋಡು, ಇದು ನಿನ್ಗೆ ಫಸ್ಟ್ ವಾರ್ನಿಂಗ್' ಅಂ ಹೇಳಿದ್ದೇ ನನ್ನ ದಾಂಪತ್ಯದ ಟರ್ನಿಂಗ್ ಪಾಯಿಂಟ್ ಆಯಿತು.