ಗೀಜಗನ ಗೂಡು
ಗೀಜಗ ಗೀಜಗ
ನಿನ್ನ ಗೂಡು ಎನಿಸಿತು ಮೋಜು
ಅದೇ ನಿನಗೆ ಜಗ
ಹೆಣೆದ ಹಣಿಗೆ ಅಬ್ಬಾ ಜೋರು!
ಬರಿಯ ಹುಲ್ಲು ಕಡ್ಡಿ
ಹಲವು ಹಕ್ಕಿ ರೆಕ್ಕೆಪುಕ್ಕ
ತಂದು ಚೆಂದ ಮಾಡಿ
ಕಟ್ಟಿ ಬಿಟ್ಟೆ ಇದನು ಹೇಗೆ?
ಒಂದರೊಳಗೊಂದನು
ಹೀಗೆ ಹಾಗೆ ಹೇಗೆ ಹೆಣೆದೆ?
ಕಲಿತೆಯಲ್ಲಿಯದನು?
ಕಲಿಸಿದಾತನಿಗಿಂತ ಮುಂದು!
ಮಳೆಯ ಚಿಂತೆ ಇಲ್ಲ
ಗಾಳಿ ಸುಳಿಯಲ್ಲೊಲ್ಲ
ಬೆಚ್ಚನೆಯ ಕಾವು ಒಳಗೆಲ್ಲ
ಸ್ವಚ್ಛಂದದ ಬದುಕಿಗಿದು ಸಾಕಲ್ಲ!
ಜೋಗುಳ ನೀ ಹಾಡಿತಿರೆ
ತಂಗಾಳಿ ತೂಗೆ ಹರುಷದಿ
ಮರಿಯು ಮಲಗಿ ಚೆಂದದಿ
ಈ ಗೂಡೇ ಸಗ್ಗ ಸಮಾನವು!
- ಗುರುದತ್ ಎನ್.ಎಸ್.