ಸಾಪ್ತಾಹಿಕಪ್ರಭ

ಪತ್ನಿ ಮುನಿಸಿಗೂ ಪ್ರಕೃತಿ ಮುನಿಸಿಗೂ ವ್ಯತ್ಯಾಸವೇನು?

Published On :

ಮಹಾಲಿಂಗ ಎಂ. ಗೋರಬಾಳ, ಮಾಣಿಕವಾಡಿ
= ಸಿದ್ರಾಮಯ್ಯನವರ ಕ್ಷೀರಸಾಗರ ಯೋಜನೆ ಯಶಸ್ವಿಯಾಗಬಹುದೇ?
    - ಅವರು ಹಾಲು ಬಿಟ್ಟು ಅಗ್ಗದ ಆಲ್ಕೋಹಾಲ್ ಬಗ್ಗೆ ಯೋಚಿಸ್ತಿದ್ದಾರೆ!

    ಸಿ. ಅನಂತರಾವ್ ಹಿರೇಹಳ್ಳಿ, ಭರಮಸಾಗರ
= ರವಿಚಂದ್ರನ್ ಟೋಪಿಗೂ ವಾಟಾಳ್ ನಾಗರಾಜ್ ಟೋಪಿಗೂ ವ್ಯತ್ಯಾಸವೇನು?
    - ರವಿಚಂದ್ರನ್ ಟೋಪಿ ಕೆಳಗೆ ರೀಲ್ ಸುತ್ತುತ್ತಿರುತ್ತದೆ, ವಾಟಾಳ್ ನಾಗರಾಜ್ ಟೋಪಿ ಕೆಳಗೆ ಎಮ್ಮೆ, ಕತ್ತೆಗಳು ಸುತ್ತುತ್ತಿರುತ್ತವೆ!

    ಪೇಂಟರ್ ಪಾಪು, ಸಂತೇಮರಹಳ್ಳಿ
= ದುಃಖಕ್ಕೆ ಕಣ್ಣೀರು ಬರುವುದು ಸಹಜ, ಆದರೆ ಸಂತೋಷಕ್ಕೂ ಕಣ್ಣೀರು ಬರುವುದೇಕೆ?
    - ಅತಿಯಾದ ಸಂತೋಷವೇ ದುಃಖಕ್ಕೆ ಮೂಲ!

    ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
= ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮೂಲ ಪ್ರಶ್ನೆಗಳನ್ನು ಏನ್ಮಾಡುತ್ತೀರಿ?
    - ಇಂಥ 'ಮೂಲ'ಭೂತ ಪ್ರಶ್ನೆಗಳಿಗೆ ಉತ್ತರಿಸಲ್ಲ!

    ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
    ಒಂದೊಮ್ಮೆ ಜಗತ್ತಿನ ಎಲ್ಲ ವ್ಯಕ್ತಿಗಳೂ ಒಳ್ಳೆಯವರಾಗಿದ್ರೆ?
    - ಕೆಟ್ಟ ವ್ಯಕ್ತಿಗೆ ಪ್ರಚಾರ ಜಾಸ್ತಿ ಸಿಗ್ತಿತ್ತು!

    ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
= ಸರಿಯಾಗಿ ಹೇಳಿ, ಧರ್ಮ ಮುಖ್ಯವೋ ಸಂವಿಧಾನ ಮುಖ್ಯವೋ?
    - ಈ ಪ್ರಶ್ನೆಯನ್ನು 'ಉಭಯ ಸಂಕಟ ಜೈನ್‌'ರಿಗೆ ಕೇಳಿ!

    ವಿ. ಹೇಮಂತಕುಮಾರ್, ಬೆಂಗಳೂರು.
    ಪತ್ನಿ ಮುನಿಸಿಗೂ ಪ್ರಕೃತಿ ಮುನಿಸಿಗೂ ವ್ಯತ್ಯಾಸವೇನು?
    - ಪತ್ನಿ ಮುನಿಸು ಮನೆತನಕ, ಪ್ರಕೃತಿ ಮುನಿಸು ನಿಮ್ಮ 'ಕೊನೆ' ತನಕ!

    ಎಂ.ಟಿ. ಕೃಷ್ಣಮೂರ್ತಿ, ಚಾಮರಾಜನಗರ
= ಟಿವಿ ಧಾರಾವಾಹಿಗಳು, ಪತ್ರಿಕೆ, ಪುಸ್ತಕಗಳನ್ನು ಹಿಂದಿಕ್ಕುತ್ತಿವೆಯಾ?
    - ಜನ ಬೆಳಗ್ಗೆದ್ದ ಕೂಡಲೇ ನೋಡೋದು ಪತ್ರಿಕೆ, ರಾತ್ರಿ ಮಲಗೋ ಹೊತ್ತಲ್ಲಿ ನೋಡೋದು ಧಾರಾವಾಹಿ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.