ಹೆಬ್ಬಂಡೆ ಮೋಡ
ಕರಗಿ ಕರಗಿ ನೀರಾಗಿ
ಸುರಿವಾಗ
ಅರೆ! ಎಲ್ಲಿ ಹೋಯಿತು
ಎದೆಯೊಳಗಿನ ದುಗುಡ?
-
ಬೇಡ ಬೇಡವೆಂದರೂ
ತೇವಗೊಳ್ಳುವ ಕಣ್ಣಂಚು
ಮಳೆಹನಿಗಳನ್ನು ಕೂಡಿಕೊಳ್ಳಲು
ಕಂಬನಿಗೇಕೆ ವೃಥಾ ಹುಚ್ಚು?
-
ಜರೆಯಬೇಡಿ!
ಮಳೆ ನೋಡುತ್ತಾ ಸುಮ್ಮಗೆ
ನಿಂತಿಲ್ಲ ಅವಳು
ಬರೆಯುತ್ತಿದ್ದಾಳೆ ಮಳೆಗೆರೆಯ
ತುಂಬೆಲ್ಲಾ ಅದೃಶ್ಯ ಕವಿತೆ ಸಾಲು
-
ಎಲ್ಲಿತ್ತು ಇಷ್ಟು ದಿನ
ಹೇಳಲಾಗದ ತವಕ
ಒನಪು ನೆನಪುಗಳ ಸುಖ
ಆಹಾ! ಈ ಮಳೆಗೆ
ಎಷ್ಟೊಂದು ಮುಖ!
-
ಹೊರಗೆ ಜಡಿಗುಟ್ಟಿ
ಸುರಿಯುತ್ತಿರುವಾಗ
ಮನವೇಕೆ ತೋಯುತ್ತಿದೆ?
ಉತ್ತರಿಸುವ ಗೊಡವೆ ಮಳೆಗಿಲ್ಲ
-
ಅವಳೂ ಬಿಕ್ಕುತ್ತಿದ್ದಾಳೆ
ಮಳೆಯೂ ಹನಿಯುತ್ತಿದೆ
ನೆಲ ಹಸಿರು ಮುಕ್ಕಳಿಸಿದ್ದು
ಯಾವ ಬಗೆಯಿಂದ?
-
ತನ್ನೆಲ್ಲ ಭಾವಗಳನ್ನು
ಮುಗಿಲಿಗೆ ರವಾನಿಸಿ
ಆಕೆ ಕಾಯುತ್ತಿದ್ದಾಳೆ
ಮತ್ತೆ ಬರುವ ಮಳೆಗಾಗಿ...
ಹೆಬ್ಬಂಡೆ ಮೋಡ
ಕರಗಿ ಕರಗಿ ನೀರಾಗಿ
ಸುರಿವಾಗ
ಅರೆ! ಎಲ್ಲಿ ಹೋಯಿತು
ಎದೆಯೊಳಗಿನ ದುಗುಡ?
-
ಬೇಡ ಬೇಡವೆಂದರೂ
ತೇವಗೊಳ್ಳುವ ಕಣ್ಣಂಚು
ಮಳೆಹನಿಗಳನ್ನು ಕೂಡಿಕೊಳ್ಳಲು
ಕಂಬನಿಗೇಕೆ ವೃಥಾ ಹುಚ್ಚು?
-
ಜರೆಯಬೇಡಿ!
ಮಳೆ ನೋಡುತ್ತಾ ಸುಮ್ಮಗೆ
ನಿಂತಿಲ್ಲ ಅವಳು
ಬರೆಯುತ್ತಿದ್ದಾಳೆ ಮಳೆಗೆರೆಯ
ತುಂಬೆಲ್ಲಾ ಅದೃಶ್ಯ ಕವಿತೆ ಸಾಲು
-
ಎಲ್ಲಿತ್ತು ಇಷ್ಟು ದಿನ
ಹೇಳಲಾಗದ ತವಕ
ಒನಪು ನೆನಪುಗಳ ಸುಖ
ಆಹಾ! ಈ ಮಳೆಗೆ
ಎಷ್ಟೊಂದು ಮುಖ!
-
ಹೊರಗೆ ಜಡಿಗುಟ್ಟಿ
ಸುರಿಯುತ್ತಿರುವಾಗ
ಮನವೇಕೆ ತೋಯುತ್ತಿದೆ?
ಉತ್ತರಿಸುವ ಗೊಡವೆ ಮಳೆಗಿಲ್ಲ
-
ಅವಳೂ ಬಿಕ್ಕುತ್ತಿದ್ದಾಳೆ
ಮಳೆಯೂ ಹನಿಯುತ್ತಿದೆ
ನೆಲ ಹಸಿರು ಮುಕ್ಕಳಿಸಿದ್ದು
ಯಾವ ಬಗೆಯಿಂದ?
-
ತನ್ನೆಲ್ಲ ಭಾವಗಳನ್ನು
ಮುಗಿಲಿಗೆ ರವಾನಿಸಿ
ಆಕೆ ಕಾಯುತ್ತಿದ್ದಾಳೆ
ಮತ್ತೆ ಬರುವ ಮಳೆಗಾಗಿ...
-ಸ್ಮಿತಾ ಅಮೃತರಾಜ್