ಕೋಲ್ಯ ವಿಧಾನಸೌಧಕ್ಕೆ ಕಾಲ್ ಮಾಡಿದ
ಕೋಲ್ಯ: ಕರ್ನಾಟಕದ ಮುಂದಿನ ಸಿಎಂ ನಾನೇ.
ವಿಧಾನಸೌಧದ ವ್ಯಕ್ತಿ: ನೀನೇನು ಹುಚ್ಚನಾ?
ಕೋಲ್ಯ: ಓಹೋ ಸಿಎಂ ಆಗೋಕೆ ಹುಚ್ಚನೇ ಆಗ್ಬೇಕಾ?
=
ಬಾರ್ನ ಹೊರಗೆ ಹೀಗಾಯ್ತು. ಫುಲ್ಲು ಟೈಟಾಗಿದ್ದ ಕೋಲ್ಯ ಎದುರಿಗೆ ಬರುತ್ತಿದ್ದ ಸಾಧುವನ್ನು ಹಿಗ್ಗಾಮುಗ್ಗಾ ಬೈದ. ಸಾಧುಗೆ ಕೋಪ ನೆತ್ತಿಗೇರ್ತು...
ಸಾಧು: ನಿನ್ಗೆ ಶಾಪ ಹಾಕ್ತೀನಿ.
ಕೋಲ್ಯ: ತಡೀ ಸ್ವಲ್ಪ, ಒಳಗಿಂದ ಗ್ಲಾಸ್ ತರ್ತೀನಿ!
=
ಟೀಚರ್: ವಿಶ್ವದಲ್ಲಿ ಹೆಚ್ಚು ನಶೆ ಏರಿಸುವ ವಸ್ತು ಯಾವುದು?
ಕೋಲ್ಯ: ಪುಸ್ತಕ.
ಟೀಚರ್: ಅದು ಹೇಗೆ?
ಕೋಲ್ಯ: ಪುಸ್ತಕ ಓದಿದ ಕೂಡಲೇ ನಿದ್ದೆ ಬರುತ್ತೆ!
ಬೆಳಗ್ಗೆ ಡ್ಯೂಟಿಗೆ ಹೋಗೋವಾಗಲೇ ಕೋಲ್ಯ, ಹೆಂಡ್ತಿಗೆ ಸಂಜೆ ಪಾರ್ಟಿಗೆ ಹೋಗೋಣ ಅಂತ ಹೇಳಿದ್ದ. ಸಂಜೆ ಹೆಂಡ್ತಿಯೇ ಮೆಸೇಜ್ ಮಾಡಿದಳು, 'ಬೇಗ ಬರ್ರೀ...'. ಅದಕ್ಕೆ ಕೋಲ್ಯ, 'ಇನ್ನು 20 ನಿಮಿಷ ಕಾಯಿ ಪ್ಲೀಸ್' ಅಂತ ರಿಪ್ಲೈ ಕಳುಹಿಸಿದ. ಹೆಂಡ್ತಿ ಅದಕ್ಕೆ, 'ಅಕಸ್ಮಾತ್ ಆಗಲೂ ಬರ್ಲಿಲ್ಲ ಅಂದ್ರೆ?' ಎಂದು ಕಳುಹಿಸಿದಳು. ಆಗ ಕೋಲ್ಯ, 'ಮೊದಲನೇ ಮೆಸೇಜನ್ನೇ ಇನ್ನೊಮ್ಮೆ ಓದು' ಎಂದು ಕಳುಹಿಸಿ ಸುಮ್ಮನಾದ.
ಸಪ್ಪೆ ಮೋರೆ ಹಾಕ್ಕೊಂಡು ಕೋಲ್ಯ ಲೈಬ್ರರಿಗೆ ಹೋದ.
ಕೋಲ್ಯ: 'ಆತ್ಮಹತ್ಯೆ ಮಾಡ್ಕೊಳ್ಳೋದು ಹೇಗೆ?' ಅಂತ ಪುಸ್ತಕ ಇದ್ಯಾ?
ಲೈಬ್ರರಿಯನ್: ವಾಪಸ್ ನಿಮ್ಮಜ್ಜ ತಂದ್ಕೊಡ್ತಾನಾ?
ಕೋಲ್ಯನಿಗೆ ದಾರಿ ಮಧ್ಯೆ 10 ಸಾವಿರ ರುಪಾಯಿಯ ನೋಟುಗಳು ಸಿಕ್ಕವು. ಕೂಡಲೇ ಎಫೆಮ್ ಸ್ಟೇಶನ್ಗೆ ಕಾಲ್ ಮಾಡಿದ.
ಆರ್ಜೆ: ಸಾರ್, ನೀವದನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಬೇಕು ಅಂತಿದ್ದೀರಾ?
ಕೋಲ್ಯ: ಛೇ! ಛೇ! ಇಲ್ಲ. ಆತನಿಗೋಸ್ಕರ ಒಂದು ದುಃಖದ ಸಾಂಗ್ ಪ್ಲೇ ಮಾಡಿ.
=
ಟೀಚರ್: ನಿನ್ನ ತಂದೆಯ ವಯಸ್ಸೆಷ್ಟು?
ಕೋಲ್ಯ: ನನ್ನಷ್ಟೇ.
ಟೀಚರ್: ಹ್ಹ ಹ್ಹ... ಅದ್ಹೇಗೆ ಸಾಧ್ಯ?
ಕೋಲ್ಯ: ನಾನು ಹುಟ್ಟಿದ ಮೇಲಷ್ಟೇ ತಾನೆ ಅವರು 'ತಂದೆ' ಆಗಿದ್ದು!
ಕೋಲ್ಯ: ನಿನ್ನೆ ಬೆಳಗ್ಗೆ ಹತ್ತು ಜನ ಒಟ್ಟೊಟ್ಟಿಗೆ ಬಂದ್ಬಿಟ್ರಪ್ಪಾ...
ಫಂಟಾ:ಓ ಹೌದಾ, ನೀನೇನ್ ಮಾಡ್ದೆ?
ಕೋಲ್ಯ: ಇನ್ನೇನು ಮಾಡೋದು, ಒಬ್ಬೊಬ್ರಿಗೇ ಕಟಿಂಗ್ ಮಾಡಿ ಕಳಿಸ್ದೆ!