ವಿ. ಹೇಮಂತ್‌ಕುಮಾರ್, ಬೆಂಗಳೂರು
= ಹದ್ದಿನ ಕಣ್ಣಿಗೂ ಹೆಣ್ಣಿನ ಕಣ್ಣಿಗೂ ವ್ಯತ್ಯಾಸವೇನು?
- ಹದ್ದಿನ ಕಣ್ಣಿಗೆ ಸಣ್ಣ ವಸ್ತುಗಳೂ ಬೀಳುತ್ತೆ. ಹೆಣ್ಣಿನ ಕಣ್ಣಿಗೆ ದೊಡ್ಡ ದೊಡ್ಡ ವಸ್ತುಗಳೇ ಬೀಳೋದು!
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
= ಇಲ್ಲೊಬ್ಬ ಟೋಪಿ, ಕೂಲಿಂಗ್‌ಗ್ಲಾಸ್ ಇಲ್ಲದ ವಾಟಾಳ್ ಫೋಟೋ ತಂದುಕೊಟ್ರೆ ಒಂದು ಲಕ್ಷ ರೂಪಾಯಿ ಕೊಡ್ತೀನಿ ಅಂತಾನಲ್ಲ?
- ಫೋಟೋಶಾಪ್‌ನಲ್ಲಿ ಚೇಂಜ್ ಮಾಡಿ ಪ್ರಿಂಟ್ ಹಾಕಿ ತೋರಿಸಿ !
ಹೆಡತಲೆ ಮಾದನಾಯಕ, ಮೂಡಲಪಾಳ್ಯ
= ಯಡಿಯೂರಪ್ಪನವರ ಪಕ್ಷದ ಚಿನ್ಹೆ ಯಾವುದು ಸಾರ್?
- ಸೈಕಲ್ ಹೊಡ್ಕೊಂಡ್ ಹೋಗಿ ತೆಂಗಿನ ಕಾಯಿ ತಗೊಂಡ್ ಬಂದ್ರು!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
= ಮನುಷ್ಯ ಯಾವುದನ್ನು ಮರೆಯಬೇಕು, ಯಾವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?
- ಯಾವುದನ್ನು ಮರೆಯಬೇಕು ಅಂದ್ಕೊಂಡಿ ರೋದನ್ನು ನೆನಪಿಟ್ಕೋಬೇಕು, ಆಮೇಲೆ ಅದನ್ನೂ ಮರೆಯಬೇಕು!
ಪೇಂಟರ್‌ಪಾಪು, ಸಂತೇಮರಹಳ್ಳಿ
= ಮಾತಿಗೆ ಬೆಲೆ ಇದೆ ಅಂದ ಮೇಲೆ ಮಾತಾಡುವ ನಾಲಿಗೆಗೂ ಬೆಲೆ ಇರುತ್ತೆ ಅಲ್ಲವೆ?
- ಹಣ್ಣಿಗೆ ಬೆಲೆ ಇದ್ದಾಕ್ಷಣ ಬೀಜಕ್ಕೂ ಬೆಲೆ ಇರುತ್ತಾ?
ಕೆ. ಸಂತೋಷ್ ಶೆಟ್ಟಿ, ಕುಂದಾಪುರ
= ಕಾವೇರಿ ನೀರಿಗಾಗಿ ಹೋರಾಡುವ ಜನ ಮನೆಯಲ್ಲಿ ಯಾವಾಗಲೂ ನೀರು ಪೋಲು ಮಾಡ್ತಾರಲ್ಲ?
- ಕಾವೇರಿ ನೀರು ಬೇರೆ ರಾಜ್ಯಕ್ಕೆ ಹೋಗುತ್ತೆ, ಮನೆ ನೀರಾದ್ರೆ ಮನೆ ಎದುರು ಚರಂಡಿಯಲ್ಲೇ ನಿಂತಿರುತ್ತೆ ಎಂಬ ಸಮಾಧಾನ.