ಇರುಳೆಲ್ಲ ಅಳುತ್ತ ಕೊಡುವ ಕಿರಿಕಿರಿ
ನವಜಾತ ಶಿಶು ಒಂಥರಾ ನಿಶಾಚರಿ
ಹೆಚ್ಚಿಸುವುದು ಒಮ್ಮೆಗೇ ಮನೆಮಂದಿಯ ಜವಾಬ್ದಾರಿ
ಮಗುವನ್ನು ಸುಧಾರಿಸುವುದು ನಿಜಕ್ಕೂ ಕಷ್ಟರೀ!!
ಅಳುವಂತೂ ನಿಲ್ಲದೆ ಸುರಿವ ಜಡಿಮಳೆ..
ಕಿರುಚುವುದು ಇದ್ದರೂ ಮುಖದಲ್ಲಿ ಮುದ್ದುಕಳೆ!
ಮಡಿಲಿನಿಂದ ಮಡಿಲಿಗೆ ಇದರ ಸವಾರಿ..
ಮನೆಯವರೆಲ್ಲಾ ಹಣ್ಣಾದರೂ ಮಾಡಿ ಚಾಕರಿ!
ಎಷ್ಟೇ ಆರ್ಭಟಿಸಿದರೂ ಈ ಮುದ್ದು ರಾಕ್ಷಸ..
ಕೊಟ್ಟರೂ ಎಲ್ಲರಿಗೂ ಎಷ್ಟೇ ಕಷ್ಟ..
ಆ ಮುದ್ದುಮುಖದಲ್ಲಿ ಮೂಡುವ ಮುಗುಳ್ನಗೆ
ಮರೆಸುವುದು ಎಲ್ಲರ ಕಷ್ಟ ಒಮ್ಮೆಗೆ!!
-ಶೈಲೇಶ್ಕುಮಾರ್ ಎಂ.