ಕೆಬಿಸಿಯಲ್ಲಿ ಕೋಲ್ಯ!

ಕೆಬಿಸಿಯಲ್ಲಿ ಕೋಲ್ಯ!
Updated on: 

'ಕೌನ್ ಬನೇಗಾ ಕರೋಡ್‌ಪತಿ' ಯಲ್ಲಿ ಕೋಲ್ಯ 13ನೇ ಪ್ರಶ್ನೆ ತಲುಪಿದ.
ಅಮಿತಾಭ್: 25 ಲಕ್ಷ ಮೌಲ್ಯದ 13ನೇ ಕ್ವಶ್ಚನ್ ಈಗ ನಿಮ್ಮೆದುರಿದೆ. ಕಂಪ್ಯೂಟರ್ ಜಿ, ಪ್ರಶ್ನೆ ಸಿದ್ಧಗೊಳಿಸಿ...
ಒಂದೇ ಸೆಕೆಂಡಲ್ಲಿ ಚಕ ಚಕ ಅಂತ ಪ್ರಶ್ನೆ ಪರದೆ ಮೇಲೆ ಮೂಡಿತು.
ಅಮಿತಾಭ್: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಯಾರ ಮಗ?
ಎ) ಅಮಿತಾಭ್ ಬಚ್ಚನ್, ಬಿ) ಲಾಲೂ ಪ್ರಸಾದ್ ಯಾದವ್, ಸಿ) ಅಬ್ದುಲ್ ಕಲಾಂ, ಡಿ) ಮೊಹ್ಮದ್ ಅಜರುದ್ದೀನ್.

ನಿಮ್ಮ ಉತ್ತರ ಏನು?
(ಕೋಲ್ಯ ತಲೆ ಕೆರೆದುಕೊಳ್ಳತೊಡಗಿದ)
ಅಮಿತಾಭ್: ನಿಮ್ಮ ಪಾಲಿಗೆ ಎರಡು ಲೈಫ್‌ಲೈನ್‌ಗಳಿವೆ.
ಕೋಲ್ಯ: ಇಲ್ಲಾ, ನನಗೆ ಉತ್ತರ ಗೊತ್ತು. ಆದರೂ ಅನುಮಾನ. ಯಾವ್ದಕ್ಕೂ 'ಫಿಫ್ಟಿ- ಫಿಫ್ಟಿ' ಬಳಸ್ಕೋತ್ತೀನಿ.
ಅಮಿತಾಭ್: ಓಕೆ ಕಂಪ್ಯೂಟರ್ ಜಿ, 2 ತಪ್ಪು ಉತ್ತರಗಳನ್ನು ಡಿಲೀಟ್ ಮಾಡಿ, 2 ಆಯ್ಕೆಗಳನ್ನಷ್ಟೇ ಕೊಡು.
ಮತ್ತೆ ಒಂದೇ ಸೆಕೆಂಡಿನಲ್ಲಿ ಕಂಪ್ಯೂಟರ್ ಪರದೆ ಮೇಲೆ 2 ಉತ್ತರಗಳಷ್ಟೇ ಉಳಿದವು.
ಬಿ) ಲಾಲೂ ಪ್ರಸಾದ್ ಯಾದವ್.
ಡಿ) ಮೊಹ್ಮದ್ ಅಜರುದ್ದೀನ್.
ಈಗ ಅಮಿತಾಭ್ ಬಚ್ಚನ್‌ಗೆ ಶಾಕ್. 'ಅರೆ! ಈ ಕಂಪ್ಯೂಟರೇ ಸರಿ ಇಲ್ವಾ?' ಎಂದುಕೊಂಡ್ರೂ ತಾನು ಕೂತ ಸ್ಥಾನಮಾನದ ಮರ್ಯಾದೆ ಕಾಪಾಡಿಕೊಳ್ಳುವ ಸಲುವಾಗಿ ಕಾರ್ಯ ಕ್ರಮ ಮುಂದುವರಿಸಿದ.
ಆದರೆ, ಈ ಎರಡು ಉತ್ತರಗಳೂ ಕೋಲ್ಯನಲ್ಲಿ ಗಲಿಬಿಲಿ ಮೂಡಿಸಿದವು.
ಅಮಿತಾಭ್: ಏನು, ಉತ್ತರ ಗೊತ್ತಾಯ್ತಾ?
ಕೋಲ್ಯ: ಇಲ್ಲ, ಯಾಕೋ ಕನ್‌ಫ್ಯೂಸ್ ಆಗ್ತಿದೆ. ನಾನು ಫ್ರೆಂಡ್‌ಗೆ ಕಾಲ್ ಮಾಡ್ಬಹುದಾ?
ಅಮಿತಾಭ್: ಓ, ಧಾರಾಳವಾಗಿ. ಯಾರಿಗೆ ಕಾಲ್ ಮಾಡ್ತೀರಾ?
ಕೋಲ್ಯ: ಇಲ್ಲಾ ಈ ಉತ್ತರಕ್ಕೆ ನಾನು ಜಯಾ ಬಚ್ಚನ್ ಅವರನ್ನೇ ಕೇಳ್ಬೇಕು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com