ಮುದಿತನದಲ್ಲೂ ಹೊಸರುಚಿ ಇದೆಯಂತೆ, ಸವಿಯಬಹುದಾ?

Updated on: 

ಕೆ.ಬಿ. ಚನ್ನಬಸಪ್ಪ, ಯಲಹಂಕ
    ಸಿನಿಮಾ ನಟಿಯರು ಚುನಾವಣೆಯಲ್ಲಿ ಗೆದ್ದು ಬರಬಹುದಾ?
    -'ವಿಲನ್‌'ಗಳು ಬಿಡಬೇಕಲ್ಲ!

    ಫ್ಯಾಷನ್ ಡಿಸೈನರ್ ಮಧು, ಹಾಸನ
    ಎಷ್ಟೇ ಕಚ್ಚಾಡಿದ್ರೂ ನಾನು ಯಡ್ಡಿ ರಾಮ-ಲಕ್ಷ್ಮಣ ಇದ್ದಂಗೆ ಕಣ್ರೀ ಅಂದ್ರಂತೆ ಈಶ್ವರಪ್ಪ?
    -ಇದು ಮತದಾರರನ್ನು 'ಹನುಮಂತ'ರನ್ನಾಗಿಸುವ ಪ್ಲಾನ್!

    ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
    ವಿವಾಹಿತ ಗಂಡಸರ ಎದುರಿನಲ್ಲಿ ಹುಡುಗಿಯರು ನಾಚಿಕೊಳ್ಳುವುದೇಕೆ?
    -ನಿಮಗಿಲ್ಲದ್ದು ನಮಗಿದೆ ಅಂತ ತೋರಿಸೋಕೆ!

    ಅಂದಾನಯ್ಯ ತಿಗರಿಮಠ, ಅಳವಂಡಿ
    ಸತ್ತ ಮೇಲೆ ಸ್ವರ್ಗ ಪ್ರಾಪ್ತಿಯಾಗುತ್ತೆ ಅಂತಾರಲ್ಲ ಏಕೆ?
    -ಸುಮ್ಮನೆ ರಂಬೆ, ಊರ್ವಶಿ, ಮೇನಕೆಯರ ಕನಸು ಕಾಡ್ತಾ ಬದುಕಿರಬೇಡಿ ಅಂತ ಅರ್ಥ!
    
    ಬಾಬು, ನಿಡಘಟ್ಟ
    ಪಂಚರಂಗಿ, ಅರ್ಧಾಂಗಿ, ಭಜರಂಗಿ ಎಂಬ ಚಿತ್ರಗಳು ಇವೆ, ಮುಂದೆ ಯಾವ 'ಅಂಗಿ' ಬರಬಹುದು?
    -ಮದರಂಗಿ, ಎಡಬಿಡಂಗಿ, ಮೂಲಂಗಿ!

    ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
    ಮುದಿತನದಲ್ಲೂ ಹೊಸರುಚಿ ಇದೆಯಂತೆ, ಸವಿಯಬಹುದಾ?
    -ಜೀರ್ಣಿಸಿಕೊಳ್ಳುವ 'ತಾಖತ್‌' ಇದ್ರೆ ಸವಿಯಬಹುದು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com