ದೊಡ್ಡ ಆಮಿಷ

Updated on: 

ಭಾರತೀಯ ಇಂಗ್ಲಿಷ್ ಲೇಖಕ ಅಮಿಷ್ ತ್ರಿಪಾಠಿ, ತಮ್ಮ ಪುಸ್ತಕವೊಂದಕ್ಕೆ ದಶಲಕ್ಷ ಡಾಲರ್ ಅಡ್ವಾನ್ಸ್ ಪಡೆದಿದ್ದಾರೆ ಎಂಬುದು ಸುದ್ದಿ. ಇದು ಭಾರತೀಯ ಲೇಖಕನೊಬ್ಬ ಪಡೆದಿರಬಹುದಾದ ದೊಡ್ಡ ಮೊತ್ತ. ಕೃತಿಯ ಹೆಸರು 'ಓತ್ ಆಫ್ ವಾಯುಪುತ್ರಾಸ್‌'. ಇದು ಅವರ 'ಶಿವ' ಕಾದಂಬರಿ ತ್ರಿವಳಿಯಲ್ಲಿ ಮೂರನೆಯದು. ಮೊದಲ ಎರಡು- ಇಮ್ಮೋರ್ಟಲ್ಸ್ ಅಫ್ ಮೆಲೂಹ ಮತ್ತು ಸೀಕ್ರೆಟ್ ಆಫ್ ದಿ ನಾಗಾಸ್ ಕೂಡ ಬೆಸ್ಟ್‌ಸೆಲ್ಲರ್. ಶಿವಪುರಾಣ, ಚರಿತ್ರೆ, ಬುಡಕಟ್ಟು ಕತೆಗಳು, ಯುದ್ಧಗಳು, ಕಲ್ಪನೆ ಎಲ್ಲವನ್ನೂ ಬೆರೆಸಿ ತಯಾರಿಸಿರುವ ಈ ಕಾದಂಬರಿಗಳು, ಪುರಾಣವನ್ನು ಹೊಸ ಬೆಳಕಿನಲ್ಲಿ ನೋಡಬಯಸುವ ಓದುಗರಿಗೆ ರಸಪಾಕದಂತಿವೆ. ಇನ್ನೊಂದು ಕೋನದಿಂದ ನೋಡಿದರೆ ಚೇತನ್ ಭಗತ್‌ನ ಮತ್ತೊಂದು ಆವೃತ್ತಿಯಂತೆ ಕಾಣಿಸುತ್ತಾನೆ ಈ ತ್ರಿಪಾಠಿ. ಸರಳ, ರಮ್ಯತೆ ಈತನ ಬರಹದ ಮುಖ್ಯ ಗುಣಗಳು. ಇಲ್ಲಿದೆ ಆತನ ಹೊಸ ಕೃತಿಯ ಆಯ್ದ ಭಾಗ.
'ವಿಶ್ವದ್ಯುಮ್ನ ಕೂಡಲೇ ತನ್ನ ಭೃಂಗ ಸೈನಿಕರಿಗೆ ಸೂಚನೆ ಕೊಟ್ಟ. ಬೇಟೆಗಾರರು ತಮ್ಮ ಕಾಲುಗಳ ಮೇಲೆ ಬಗ್ಗಿದರು. ವಿಶ್ವದ್ಯುಮ್ನನ ಹಿಂದಿದ್ದ ಕಾರ್ತಿಕನ ಕಣ್ಣುಗಳು ಬೆಳಗಿದವು- ಸಿಳ್ಳು ಹಾಕುತ್ತಾ 'ಅದ್ಭುತ' ಎಂದುಸುರಿದ.
ವಿಶ್ವದ್ಯುಮ್ನ ಕಾರ್ತಿಕನತ್ತ ತಿರುಗಿದ. ಶಿವನ ಗಣಗಳಲ್ಲಿ ಹೆಚ್ಚಿನ ಮಂದಿ ಈಗಾಗಲೇ ಪಂಚವಟಿಯ ಆತಿಥ್ಯ ಪ್ರದೇಶದಲ್ಲಿ ವಿಶ್ರಮಿಸಿದ್ದರು. ಕೆಲವರನ್ನಷ್ಟೇ ಉದರಂಭರಣಕ್ಕಾಗಿ ಮಾಂಸ ಸಂಗ್ರಹಿಸಲು ಕಳುಹಿಸಲಾಗಿತ್ತು. ಪ್ರಯಾಣದುದ್ದಕ್ಕೂ ಬೇಟೆಯಲ್ಲಿ ಸಾಕಷ್ಟು ಚಾಕಚಕ್ಯತೆ ಪ್ರದರ್ಶಿಸಿದ್ದ ಕಾರ್ತಿಕ, ಸಹಜವಾಗಿಯೇ ಗುಂಪಿನ ನೇತೃತ್ವ ವಹಿಸಿದ್ದ. ವಿಶ್ವದ್ಯುಮ್ನ, ನೀಲಕಂಠನ ಈ ಮಗನಿಗೆ ಜತೆ ನೀಡಿದ್ದ. ಕಾರ್ತಿಕನ ಯುದ್ಧಕೌಶಲದ ಬಗ್ಗೆ ಅವನಿಗೆ ಮೆಚ್ಚುಗೆಯಿತ್ತು.
'ಅವು ಖಡ್ಗಮೃಗಗಳು ಪ್ರಭು' ಎಂದ ವಿಶ್ವದ್ಯುಮ್ನ ಮೃದುವಾಗಿ.
ಖಡ್ಗಮೃಗ ಸುಮಾರು ನಾಲ್ಕು ಮೀಟರ್ ಉದ್ದದ ಬೃಹತ್ ಗಾತ್ರದ ಪ್ರಾಣಿ. ಮುದುಡಿದ ಮಡಿಕೆಗಳುಳ್ಳ ಕಂದು ಬಣ್ಣದ ಚರ್ಮ. ಅನನ್ಯವಾದದ್ದು ಅದರ ಮುಸುಡಿಯ ಕೊಂಬು. ಅದು ಭಯ ಹುಟ್ಟಿಸುವ ಅದರ ಆಯುಧ. 'ನನಗೊತ್ತು' ಎಂದ ಕಾರ್ತಿಕ. 'ಕಾಶಿಯ ಸುತ್ತಮುತ್ತಲೂ ಅವು ಇವೆ. ಆನೆಯ ಗಾತ್ರ. ದೃಷ್ಟಿ ಸ್ವಲ್ಪ ಮಬ್ಬು, ಆದರೆ ಅವುಗಳ ವಾಸನೆ ಮತ್ತು ಧ್ವನಿಗ್ರಹಣ ಭಯಂಕರ'
'ಅವುಗಳ ಬೆನ್ನಿಗೆ ಬಾಣಗಳನ್ನು ತೂರಿ. ಸಾಧ್ಯವಿದ್ದಷ್ಟು ಗದ್ದಲ ಎಬ್ಬಿಸಿ. ಅದನ್ನು ಮುಂದಕ್ಕೆ ಓಡಿಸಬೇಕು' ನಾವು ಎಂದ ಕಾರ್ತಿಕ. ವಿಶ್ವದ್ಯುಮ್ನನ ಕಣ್ಣುಗಳು ಭಯದಿಂದ ತುಂಬಿದವು.ನಿದ್ರಿಸಲಾರದೆ
ನಿದ್ರಿಸಲಾರದೆ ಚಡಪಡಿಸಿರುವೆ
ಅದರಿಂದಲೆ ಸಂಗೀತವ ನುಡಿಸುವೆ
ಚಂದ್ರ ಹೇಳುವನು: ರವಿಯಿಲ್ಲದೆ ನಾ
ಎಷ್ಟು ದಿನ ತಾನೆ ಇರುವೆ?

ಒಲುಮೆಯ ವಜ್ರ ಎದೆಯೊಳಗಿಲ್ಲದಿದ್ದರೆ
ನನ್ನಂಗಡಿ ಕುಸಿಯಲಿ ಪುಡಿಪುಡಿಯಾಗಿ.

ಈ ದೇಹದ ಬಟ್ಟಲಿಗೆ ವೈನು ಸುರಿಯುವ
ಕೌಶಲ ಗೊತ್ತಿರುವವಳೆ
ನನ್ನ ಬಟ್ಟಲಿಗೊಂದು ಗುಟುಕು ಸುರಿ.

- ಜಲಾಲುದ್ದೀನ್ ರೂಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com