ಹೇರ್ ಡ್ರೆಸ್ಸರ್: ನಿಮ್ಮ ಕೂದಲಿನಿಂದಲೇ ನಿಮಗೆ ಊಹಿಸಲಸಾಧ್ಯವಾದ ವಿನ್ಯಾಸಗಳನ್ನು ಮಾಡುವ ಜಾದೂಗಾರ.
ಹೆರಿಗೆ: ಎಲ್ಲ ಕೆಲಸ ನೀವೇ ಮಾಡಬೇಕಾದ, ವೈದ್ಯರು ಮಾತ್ರ ಕ್ರೆಡಿಟ್ ತೆಗೆದುಕೊಳ್ಳುವ ಸಂದರ್ಭ.
ಉಪದೇಶ: ನಾವು ಮತ್ತೆ ಮತ್ತೆ ದಾಟಿಸಲು ಯತ್ನಿಸುತ್ತಲೇ ಇರುವ, ಚಲಾವಣೆಯಾಗದ ಹರಿದ ನೋಟು.
ಜನನ: ಎಲ್ಲ ಅನಾಹುತಗಳಿಗಿಂತ ಮೊದಲು ಉಂಟಾಗುವಂಥದು.
ಚಪ್ಪಲಿ: ನೀವೆಷ್ಟೇ ಮೆಟ್ಟಿ ತುಳಿಯಿರಿ, ಮತ್ತೆ ಆ ಪೀಡೆ ನಿಮ್ಮೊಂದಿಗೇ ಬರುತ್ತದೆ.
ಭವಿಷ್ಯ: ಈತ ಹೇಳುತ್ತಿರುವುದು ಸುಳ್ಳಾಗಿರಲಿ ಎಂದು ಕೇಳುವವನಿಗೂ ಅನಿಸುವಂಥದು.
ಸರಕಾರ: ಬಡವರಿಂದ ತೆರಿಗೆ ಪಡೆದು ಶ್ರೀಮಂತರಿಗೆ ಸಾಲ ಕೊಡುವ ಸಂಸ್ಥೆ.