ಇತ್ತೀಚೆಗೆ ಇಂಗ್ಲಿಷ್ ಥ್ರಿಲ್ಲರ್ ಫಿಕ್ಷನ್ ಲೇಖಕ ಜೆಫ್ರಿ ಆರ್ಚರ್ ಬೆಂಗಳೂರಿಗೆ ಬಂದಿದ್ದರು. ಅವರನು ನೋಡಲು ಕ್ಯಾಬರೆ ಶೋಗೆ ಸೇರಿದಂತೆ ಯುವ ಅಭಿಮಾನಿಗಳ ಹಿಂಡು ಸೇರಿತ್ತು. ನಮ್ಮ ಯಾವ ಬರಹಗಾರನಿಗಾದರೂ ಇಂಥ ಸ್ವಾಗತ ಸಿಗಬಹುದೆ? ಅನುಮಾನ.
ಇರಲಿ, ಜೆಫ್ರಿ ಹೇಳಿದ ಒಂದು ಮಾತಂತೂ ನಮ್ಮ ಕನಡಕ್ಕೂ ಅನ್ವಯವಾಗುವಂತಿದೆ: 'ಕಾದಂಬರಿಗೆ ಪ್ರಕಾಶಕರು ಸಿಗುವುದು ತುಂಬಾ ಕಷ್ಟ. ಸಣ್ಣಕತೆಗಳಿಗಂತೂ ಅಸಾಧ್ಯ. ಇನು ನೀವು ಕವಿಯಾದರಂತೂ, ನಿಮ್ಮನೇ ಶೂಟ್ ಮಾಡಿಕೊಳ್ಳುವುದೇ ಗತಿ!'