ಒಂದೇಟು

Updated on: 

ನನ್ನ ವರ್ತನೆಯಲ್ಲಿ ವಿರೋಧಾಭಾಸ ಇದೆಯಾ? ಇದೊಳ್ಳೆ ವಿರೋಧಾಭಾಸ ಆಯ್ತಲ್ಲ!
ಮಾತಿನ ಸಮಸ್ಯೆ ಅಂದರೆ, ಕೇಳುವವನು ಅದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಭಾವಿಸುವುದು.
ನೀವು ಎಲ್ಲರಿಗಿಂತ ಭಿನ್ನ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ, ಎಲ್ಲರಂತೆಯೇ.
ಪ್ರತಿ ಮಹಿಳೆಯೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಹೇಳುವ ಮಾತು: ಎಲ್ಲಾ ಗಂಡಸರೂ ಮೂರ್ಖರು. ನನ್ನ ಗಂಡ ಅವರ ಮಹಾರಾಜ.
ಸಂಜೆವಾರ್ತೆಗಳು 'ಗುಡ್ ಈವನಿಂಗ್‌' ಎಂದೇ ಶುರುವಾಗುತ್ತವೆ. ಆದರೆ ಅದು ಗುಡ್ ಈವನಿಂಗ್ ಅಲ್ಲ ಅನ್ನುವುದು ವಾರ್ತೆ ಕೇಳಿದ ಮೇಲೆ ತಿಳಿಯುತ್ತದೆ.
ಹಾರುವ ಹಕ್ಕಿಗಳನ್ನು ನೋಡಿದಾಗ ಅನಿಸುವುದು: ನನಗೂ ಹಾರಲು ಬರುತ್ತಿದ್ದರೆ ನಾನು ಯಾರ ತಲೆ ಮೇಲೆ ವಿಸರ್ಜಿಸಬೇಕಿತ್ತು?
ತಪ್ಪುಗಳಿಂದ ಪಾಠ ಕಲಿಯುತ್ತೇವೆ ಎನ್ನುತ್ತಾರಲ್ಲ, ಅದು ಸುಳ್ಳು. ಹಾಗಿದ್ದರೆ ಕೆಲವರು ಎರಡು, ಮೂರು ಮಕ್ಕಳನ್ನೇಕೆ ಹುಟ್ಟಿಸುತ್ತಾರೆ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com