ಸಾಪ್ತಾಹಿಕಪ್ರಭ

ಶಿಖರ ಶುಚಿ

ಶಿಖರ ಶುಚಿ
Published On :

ಹಿಮದ ನೆತ್ತಿಮೇಲೆ ನಿಂತು ಜಗತ್ತಿನತ್ತ ಕಣ್ಣರಳಿಸುವ ಕನಸು ಅತಿರೇಕ ತಲುಪಿದಾಗ ಮನಸ್ಸು ಮೌಂಟ್ ಎವರೆಸ್ಟ್ ಏರಲು ಸಿದ್ಧಗೊಳ್ಳುತ್ತದೆ. ಎಡ್ಮಂಡ್ ಹಿಲರಿ ಅಲ್ಲಿ ಮಂಡಿಯೂರಿ ಬಂದಮೇಲೆ, ಇಲ್ಲಿಯ ತನಕ ಸುಮಾರು 700 ಮಂದಿ ಹಿಮದ ಮೇಲೆ ಹೆಸರು ಗೀಚಿ ಬಂದಿದ್ದಾರೆ. ಹತ್ತಿರ ಹತ್ತಿರ 4,000 ಪರ್ವತಾರೋಹಿಗಳು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಂಡು ಏರಲೆತ್ನಿಸಿ ಸೋತಿದ್ದಾರೆ.
ಇವರೆಲ್ಲ ಕೇವಲ ತಮ್ಮ ದೇಹವನ್ನಷ್ಟೇ ಆ ಎತ್ತರಕ್ಕೆ ಒಯ್ಯುವುದಿಲ್ಲ. ತಮ್ಮೊಂದಿಗೆ ಆಕ್ಸಿಜನ್ ಸಿಲಿಂಡರ್, ಬಾಟಲಿಗಟ್ಟಲೆ ನೀರು, ಪ್ಲಾಸ್ಟಿಕ್ ಕವರಿನಲ್ಲಿ ಬೆಚ್ಚಗೆ ಕುಳಿತ ಅದೂಇದು ಫುಡ್ಡುಗಳು... ಇವೆಲ್ಲವನ್ನೂ ಖರ್ಚುಮಾಡಿದ ಮೇಲೆ 'ವೇಸ್ಟ್‌' ಆದ ವಸ್ತುಗಳನ್ನು ಆ ನೆತ್ತಿ ಮೇಲೆ ಚೆಲ್ಲಿ ಬರುತ್ತಾರೆ. ಹೀಗಾಗಿ, ಅವೆಲ್ಲ ಕಸಗಳಿಂದ ಮೌಂಟ್ ಎವರೆಸ್ಟಿನ ತೂಕ ಇಮ್ಮಡಿಯಾಗಿದೆ. ಈ ಕಸಗಳನ್ನು ನಿರ್ಮೂಲನೆಗೊಳಿಸುವ ಕೆಲಸವನ್ನು ಮೊನ್ನೆ ಪುಣ್ಯಾತ್ಮರ ತಂಡವೊಂದು ಮಾಡಿತು. ಇದರಲ್ಲಿ ವಿದೇಶಿ ಪ್ರವಾಸಿಗರೂ ಸೇರಿದ್ದರು. 50 ಟನ್ ತ್ಯಾಜ್ಯ, ಕೊಳೆತ ಶವಗಳನ್ನು 'ಸೇವಿಂಗ್ ಮೌಂಟ್ ಎವರೆಸ್ಟ್ ಪ್ರಾಜೆಕ್ಟ್‌' ಅಡಿಯಲ್ಲಿ ಹೊರಹಾಕಲಾಯಿತು. ಫಿನ್ಜೋ ಶೆರ್ಪಾ ತಂಡದ ಈ ಮಹಾಕಾರ್ಯಕ್ಕೆ ಥ್ಯಾಂಕ್ಸ್ ಹೇಳಲೇಬೇಕು. ವಿಶ್ವದ ಅತಿ ಎತ್ತರದ ಆಕರ್ಷಣೆ ಹಾಳಾಗಬಾರದೆಂಬ ಅವರ ಕಾಳಜಿ ಎಲ್ಲ ಪ್ರವಾಸಿಗರ ಬೆನ್ನೇರಿದರೆ ಮೌಂಟ್ ಎವರೆಸ್ಟ್ ಹಗುರವಾಗುತ್ತದೆ. ಇಲ್ಲವಾದಲ್ಲಿ ಎವರೆಸ್ಟ್ ಕೊಳೆಯುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.