ಭರ್ಜರಿ ಬಹುಮಾನ
ಕೋಲ್ಯ ಮತ್ತು ಫಂಟಾ ಒಂದು ಬೀಚಿಗೆ ಹೋದರು. ದಡದ ಸನಿಹದಲ್ಲಿ ಒಂದು ಬೋರ್ಡ್ ಇತ್ತು; 'ಇಲ್ಲಿ ಮುಳುಗುವವರನ್ನು ರಕ್ಷಿಸುವವರಿಗೆ 500 ರು. ಪುರಸ್ಕಾರ' ಅಂತ.
ಫಂಟಾ: ದುಡ್ಡು ಮಾಡಲು ಒಳ್ಳೆ ದಾರಿ ನೋಡು. ನಾನು ಮುಳುಗ್ತೇನೆ, ತಕ್ಷಣ ನೀನು ಬಂದು ನನ್ನ ರಕ್ಷಿಸು.
ಕೋಲ್ಯ: ಆಯ್ತು, ಆಯ್ತು.
ಫಂಟಾ ಆ ನೀರಲ್ಲಿ ಹೋಗಿ ಮುಳುಗಿದ. ಆದರೂ, ಕೋಲ್ಯ ದಡದಲ್ಲಿ ನಿಂತಲ್ಲೇ ಇದ್ದ.
ಫಂಟಾ: ನನ್ನ ಪ್ರಾಣ ಹೋಗ್ತಿದೆ ಬೇಗ ಬಾರೋ...
ಕೋಲ್ಯ: ನೀನು ಆ ಬೋರ್ಡ್ ಕೆಳಗೆ ನೋಡಿದ್ಯಾ? 'ಇಲ್ಲಿ ಹೆಣ ಎತ್ತಿದವರಿಗೆ 1,000 ರು. ಪುರಸ್ಕಾರ' ಅಂತ ಬರ್ತಿದ್ದಾರೆ. ನಾನ್ ಬರಲ್ಲಪ್ಪ!
-
ಕೋಲ್ಯಿಣಿ: ನಿನಗಿಂತ ಯಾರಾದ್ರೂ ರಾಕ್ಷಸನನ್ನು ಕಟ್ಕೊಂಡಿದ್ದಿದ್ರೆ ನೆಮ್ಮದಿಯಿಂದಿರ್ತಿದ್ದೆ.
ಕೋಲ್ಯ: ರಕ್ತಸಂಬಂಧಿಗಳೊಂದಿಗೆ ಮದ್ವೆ ಆಗ್ಬಾರ್ದು ಅಂತ ಗೊತ್ತಿಲ್ವೇನೇ?
-
ರನ್ನಿಂಗ್ ರೇಸ್
ನೂರು ಮೀಟರ್ ರನ್ನಿಂಗ್ ರೇಸ್ ಇತ್ತು. ರೆಫ್ರಿ 'ರೆಡಿ 1,2,3 ಗೋ' ಎಂದು ಹೇಳಿದ. ಟ್ರ್ಯಾಕಿನಲ್ಲಿದ್ದವರೆಲ್ಲ ಓಡಿದರು; ಕೋಲ್ಯನನ್ನು ಬಿಟ್ಟು.
ರೆಫ್ರಿ: ಎಲ್ಲರೂ ಓಡಿದ್ರು, ನೀನ್ಯಾಕೆ ಇನ್ನೂ ಇಲ್ಲೇ ಇದ್ದೀಯ?
ಕೋಲ್ಯ: ನನ್ನ ಸಂಖ್ಯೆ '4'.
-
ಮತ್ತೆ ಹೆಂಡ್ತಿ?
ಕೋಲ್ಯ: ಗಂಡ ಸಂಸಾರದ ತಲೆ.
ಫಂಟಾ: ಮತ್ತೆ ಹೆಂಡ್ತಿ?
ಕೋಲ್ಯ: ಅವಳು 'ಕುತ್ತಿಗೆ'. ತಲೆಯನ್ನು ತನಗೆ ಬೇಕಾದ್ಹಂಗೆ ತಿರುಗಿಸೋದು ಕುತ್ತಿಗೆಯೇ ಅಲ್ವೇ?