ಮಕ್ಕಳೇ, ಪರೀಕ್ಷೆ ಬಂತಲ್ಲವೆ? ಚೆನ್ನಾಗಿ ಅಭ್ಯಾಸ ಮಾಡಿ ಸಿದ್ಧರಾಗಿದ್ದೀರಿ. ಆದರೂ ಸಣ್ಣದೊಂದು ಅಳುಕು ಕಾಡುತ್ತಿರಬಹುದು. ಅದನ್ನೆಲ್ಲ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಹೊರಡಿ.
ಪಬ್ಲಿಕ್ ಎಕ್ಸಾಮ್ ಬರೆಯುವವರು ಹಿಂದಿನ ದಿನವೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ನಿಮ್ಮ ಆಸನ ಯಾವ ಕೊಠಡಿಯಲ್ಲಿ ಬರುತ್ತದೆ ಎನ್ನುವುದನ್ನು ನೋಡಿಕೊಳ್ಳಿ.
15 ನಿಮಿಷ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ಹೋಗಿ. ಸಹಪಾಠಿಗಳೊಂದಿಗೆ ಚರ್ಚೆಗೆ ನಿಲ್ಲಬೇಡಿ.
ಪ್ರಶ್ನೆಪತ್ರಿಕೆಯನ್ನೊಮ್ಮೆ ಮೇಲಿಂದ ಕೆಳಗಿನವರೆಗೂ ಓದಿ. ಇದಕ್ಕಾಗಿಯೇ ನಿಮಗೆ 15 ನಿಮಿಷ ಕಾಲಾವಕಾಶವಿರುತ್ತದೆ. ಸುಲಭವಾಗಿರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿ.
ಯಾವ ಪ್ರಶ್ನೆಗಳಿಗೂ ಉತ್ತರಿಸದೇ ಬಿಡಬೇಡಿ. ಎಷ್ಟು ಜ್ಞಾಪಕವಿದೆಯೋ ಅಷ್ಟನ್ನೇ ಬರೆಯಿರಿ. ಏಕೆಂದರೆ 1 ಅಂಕದಿಂದ ಮೊದಲ ಶ್ರೇಣಿ ಬರುವ ಅವಕಾಶ ತಪ್ಪಿಹೋಗಬಹುದು!
ಯಾವಾಗಲೂ ನಗುತ್ತಾ ಇರಿ. ಕೋಪ ಪ್ರವೃತ್ತಿ ಬೇಡ. ಕೋಪದಿಂದ ಜ್ಞಾಪಕಶಕ್ತಿ ಕುಂಠಿತವಾಗುತ್ತದೆ.
ಪರೀಕ್ಷೆ ಮುಗಿಯುವವರೆಗೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಆರೋಗ್ಯ ಚೆನ್ನಾಗಿದ್ದರೆ ಓದಲು ಉತ್ಸಾಹ.