ಓದಿ ನೋಡು
ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ರಾತ್ರಿ ಮಲಗುವಾಗ, ಬೆಳಗ್ಗೆ ಎದ್ದಾಕ್ಷಣ ಅಪ್ಪ-ಅಮ್ಮಂದಿರ ಬಳಿ ಅವರ ಬಳಿ ಅವರ ಬೇಡಿಕೆ ಒಂದೇ, 'ಕಥೆ ಹೇಳು'. ಅದರಲ್ಲೂ ರಮ್ಯಾದ್ಭುತ ಅನುಭವ ನೀಡುವ ಫ್ಯಾಂಟಸಿ ಕಥೆಗಳೆಂದರೆ ಬಹಳ ಇಷ್ಟ.
39 ವರ್ಷ ಅಧ್ಯಾಪನ ವೃತ್ತಿಯಲ್ಲಿದ್ದ ತೀರ್ಥಹಳ್ಳಿಯ ಕೆ.ಆರ್. ಉಮಾದೇವಿ ಉರಾಳ್ ವೃತ್ತಿಜೀವನದ ಭಾಗವಾಗಿ ಮಕ್ಕಳಿಗೆ ಹೇಳಿರುವ ಕಥೆಗಳು ಅಸಂಖ್ಯಾತ. ಅವುಗಳಲ್ಲಿ ಆಯ್ದ ಕೆಲವನ್ನು 'ಮಕ್ಕಳಿಗಿದು ಕಥಾಸಮಯ' (ಮಕ್ಕಳಿಗಾಗಿ ಮೌಲ್ಯಯುತ ಕಥೆಗಳು) ಸಂಕಲನ ತಂದಿದ್ದಾರೆ. ಮಂಗಳೂರಿನ ಜೈ ಭಾರತ್ ಸರ್ವಿಸಸ್ (ಮೊ: 9620986366) ಪ್ರಕಟಿಸಿರುವ ಈ ಹೊತ್ತಿಗೆಯಲ್ಲಿ ಆರು ಕಥೆಗಳಿವೆ. ಬಾಲಂಟೈನ್ ಅವರ 'ದಿ ಕೋರಲ್ ಐಲ್ಯಾಂಡ್' ಅನ್ನು 'ಹವಳದ ದ್ವೀಪ' ಎಂದು ಹಿರಿಯ ಸಾಹಿತಿ ಎ.ಎನ್. ಮೂರ್ತಿರಾವ್ ಅನುವಾದಿಸಿದ್ದರು. ಆ ಕಾದಂಬರಿಯ ಸಂಕ್ಷಿಪ್ತ ರೂಪವೂ ಇಲ್ಲಿದೆ. 88 ಪುಟಗಳ ಪುಸ್ತಕದ ಬೆಲೆ 65 ರುಪಾಯಿ.
ಮಾಧ್ಯಮಿಕ ಹಾಗೂ ಪ್ರೌಢಶಾಲಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಪುಸ್ತಕ ರೂಪಿಸಲಾಗಿದೆ ಎನ್ನುವುದು ಲೇಖಕಿಯ ಮಾತು. ಅವರ ಸಂಪರ್ಕ: 9480113111.