ಪ್ರಧಾನ ಸುದ್ದಿ

ರೂಪ ಒಂದೇ ನಾಮ ಹಲವು..!

ರೂಪ ಒಂದೇ ನಾಮ ಹಲವು..!
Published On :

ಬೆಂಗಳೂರು: ಲವ್, ಸೆಕ್ಸ್, ದೋಖಾ.... ಈ ಪದ ಕೇಳಿದ ತಕ್ಷಣ ಪ್ರತಿಯೊಬ್ಬರ ಮನಸ್ಸಿಗೆ ಬರುವುದು ಹುಡುಗನಿಂದ ಯುವತಿಗೆ ಮೋಸವಾಗಿದೆ ಎಂದು. ಆದರೆ, ಈ ಪ್ರಕರಣ ಅದಕ್ಕೆ ಹೊರತು.
ಈ ಪ್ರಕರಣದಲ್ಲಿ ಯುವತಿಯೊಬ್ಬಳು ಒಬ್ಬನಿಗಲ್ಲ ನಾಲ್ಕು ಯುವಕರಿಗೆ 'ಲವ್‌ನಾಮ' ಹಾಕಿದ್ದಾಳೆ. ಲಕ್ಷಾಂತರ ರುಪಾಯಿ ವೆಚ್ಚ ಮಾಡಿಸಿಕೊಂಡು ನಾಲ್ವರು ಯುವಕರಿಗೂ 'ಪಂಗನಾಮ' ಹಾಕಿದ್ದಾಳೆ. ಇದಕ್ಕೆ ಅವಳಿಗೆ ಸಹಾಯ ಮಾಡಿದ್ದು 'ಫೇಸ್‌ಬುಕ್ ಲವ್‌'. ಅದಕ್ಕೇ ಪಾಲಿಕೆ ಸದಸ್ಯರೊಬ್ಬರ ಪುತ್ರನೂ ಸೇರಿ ನಾಲ್ಕು ಯುವಕರು ಮೋಸ ಹೋಗಿದ್ದಾರೆ.
'ಪ್ರೀತಿ' ಎಂಬ ಹೆಸರಿನಲ್ಲಿ ಯುವಕರೊಂದಿಗೆ 'ಚೆಲ್ಲಾಟ'ವಾಡಿ ಅವರಿಂದ ಲಕ್ಷಗಟ್ಟಲೆ ಖರ್ಚು ಮಾಡಿಸಿ, ವಿವಾಹವಾಗುವುದಾಗಿ ನಂಬಿಸಿ ಕೊನೆಗೆ ಕೈಕೊಟ್ಟು ಅವರಿಗೆ 'ಪಂಗನಾಮ' ಹಾಕಿದ್ದಾಳೆ. ಆಕೆಯಿಂದ 'ಮೋಸ'ಕ್ಕೊಳಗಾದ ಯುವಕ, ಸುಮ್ಮನೆ ಕೂರದೆ ಈ ಬಗ್ಗೆ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಗಿರೀಶ್ ಈ ಮೋಸದ ಲವ್ ಬಲೆಗೆ ಬಿದ್ದು, ಸುಮಾರು 3 ಲಕ್ಷ ಹಣ ಕಳೆದುಕೊಂಡಿದ್ದಾರೆ. ಅಲ್ಲದೆ, ಇನ್ನೂ ಮೂವರು ಯುವಕರನ್ನು ವಂಚಿಸಿದ್ದಾಳೆ ಎಂದು ದೂರಿದ್ದಾರೆ. ಜ್ಞಾನಭಾರತಿ ಬಡಾವಣೆ ನಿವಾಸಿ ರೂಪಲಕ್ಷ್ಮಿ ಎಂಬಾಕೆಯೇ ಮೋಸ ಮಾಡಿದ ಯುವತಿ. ಈ ಯುವತಿ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಗೃಹ ಸಚಿವ ಕೆ.ಜೆ.ಜಾರ್ಜ್ ಮಧ್ಯಪ್ರವೇಶಿಸಬೇಕಾಯಿತು. ಸೆ.17ರಂದು ಈ ದೂರು ದಾಖಲಾಗಿದೆ. ಆದರೆ ಯುವತಿ ಬಂಧನಕ್ಕೆ ಪೊಲೀಸರು ಇನ್ನೂ ಮುಂದಾಗಿಲ್ಲ.

ಏನಿದು ಘಟನೆ:
ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ತಮ್ಮ ಸ್ನೇಹಿತನ ಫೇಸ್‌ಬುಕ್‌ನ ಸ್ನೇಹಿತರ ಪಟ್ಟಿಯಲ್ಲಿದ್ದ ಯುವತಿ ರೂಪಲಕ್ಷ್ಮಿಗೆ ಸ್ನೇಹಿತೆಯಾಗುವಂತೆ ಸಂದೇಶ ಕಳುಹಿಸಿದ್ದರು. ಅದನ್ನು ಒಪ್ಪಿದ ಆಕೆ ಒಂದು ದಿನ ಫೇಸ್‌ಬುಕ್‌ನಲ್ಲಿ ಸಂದೇಶ ಕಳುಹಿಸಿದ್ದಳು. ಇದು ಹಾಗೆಯೇ ಮುಂದುವರಿದು ಅದು ಪ್ರೇಮಕ್ಕೆ ತಿರುಗಿದೆ. ಆಗ ಯುವತಿ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ವಿವಾಹಕ್ಕೂ ಒಪ್ಪಿದ್ದಳು.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.