ಪ್ರಧಾನ ಸುದ್ದಿ

2 ದುರಂತ, 14 ಬಲಿ

ಪ್ರತ್ಯೇಕ ಎರಡು ಅಪಘಾತ ಪ್ರಕರಣಗಳಲ್ಲಿ 8 ತಿಂಗಳ ಮಗು ಸೇರಿ ಒಟ್ಟು 14 ಜನರು ಮೃತಪಟ್ಟ ಘಟನೆ ಭಾನುವಾರ ರಾಜ್ಯದಲ್ಲಿ ಸಂಭವಿಸಿದ್ದು,...

2 ದುರಂತ, 14 ಬಲಿ
Published On :

ಕನ್ನಡಪ್ರಭ ವಾರ್ತೆ, ಬೆಳಗಾವಿ/ಕುಣಿಗಲ್, ಸೆ.22-
ಪ್ರತ್ಯೇಕ ಎರಡು ಅಪಘಾತ ಪ್ರಕರಣಗಳಲ್ಲಿ 8 ತಿಂಗಳ ಮಗು ಸೇರಿ ಒಟ್ಟು 14 ಜನರು ಮೃತಪಟ್ಟ ಘಟನೆ ಭಾನುವಾರ ರಾಜ್ಯದಲ್ಲಿ ಸಂಭವಿಸಿದ್ದು, 12 ಜನರು ಗಾಯಗೊಂಡಿದ್ದಾರೆ.
ಬೆಳಗಾವಿ ನಗರ ಸಮೀಪದ ವಂಟಮೂರಿ ಘಾಟ್ ಬಳಿ ಲಾರಿ ಮುಂಭಾಗದ ಟೈರ್ ಸ್ಫೋಟಗೊಂಡು ಸಂಭವಿಸಿದ ಸರಣಿ ಅಪಘಾತದಲ್ಲಿ ಒಟ್ಟು 9 ಜನರು ಮೃತಪಟ್ಟರೆ, ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಬಳಿ ಕಾರ್‌ವೊಂದರ ಮುಂಭಾಗದ ಚಕ್ರ ಸಿಡಿದು ಸಂಭವಿಸಿದ ದುರಂತದಲ್ಲಿ 8 ತಿಂಗಳ ಮಗು ಸೇರಿ 5 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.  
ಗಣೇಶ ಮೂರ್ತಿ ನೋಡಲು ಹೋಗಿದ್ದರು: ಭಾನುವಾರ ಮಧ್ಯಾಹ್ನ ಬೆಳಗಾವಿ ಸಮೀಪದ ವಂಟಮೂರಿ ಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದರ ಮುಂಭಾಗದ ಟೈರ್ ಸ್ಫೋಟಗೊಂಡಿತು. ಇದರಿಂದಾಗಿ ಲಾರಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಲಾರಿ ಆಚೆ ಬದಿಗೆ ಬೀಳುವ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ವಾಹನಗಳಿಗೆ ಡಿಕ್ಕೆ ಹೊಡೆಯಿತು. ಅದರ ಪರಿಣಾಮವಾಗಿ ಸರಣಿ ಅಪಘಾತ ಸಂಭವಿಸಿ, 9 ಜನರು ಮೃತಪಟ್ಟರೆ, 9 ಜನರು ತೀವ್ರವಾಗಿ ಗಾಯಗೊಂಡರು.
ಮೃತಪಟ್ಟ 9, ಗಾಯಗೊಂಡ 9 ಜನರ ಪೈಕಿ 7 ಮಂದಿ ಬೆಳಗಾವಿ ಸಮೀಪದ ಮಚ್ಛೆ ಗ್ರಾಮದವರು. ಸಂಕೇಶ್ವರದಲ್ಲಿ ಪ್ರತಿಷ್ಠಾಪಿಸಲಾಗಿದ್ದ 21 ದಿನಗಳ ಗಣೇಶ ಮೂರ್ತಿಗಳನ್ನು ವೀಕ್ಷಿಸಿ ಬೆಳಗಾವಿಗೆ ಕಾರು, ಬೈಕ್, ಕ್ಯಾಂಟರ್ ಲಾರಿ, ಮಿನಿ ಆಟೋದಲ್ಲಿ ವಾಪಸ್ಸಾಗುತ್ತಿದ್ದರು. ಗಾಯಗೊಂಡ ಇನ್ನಿಬ್ಬರು ಉರುಳಿಬಿದ್ದ ಲಾರಿಯಲ್ಲಿದ್ದವರು. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಹಾಗೂ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟರನ್ನು ವಿಜಯ ಖನ್ನೂರಕರ(32) ಅವರ ®Ú~­„Ò½}Û ಖನ್ನೂರಕರ(27) ಉದ್ಯಮಭಾಗ ರಾಜಾರಾಮ ನಗರದ ನಿವಾಸಿಗಳಾದ ಇಂದುಮತಿ ಮಹಾದೇವ ಪೂಜಾರ(55), ಮಾಲು ಕೃಷ್ಣ ಕೃಷ್ಣಪ್ಪಗೋಳ(43), ಪದ್ಮ ಅಶೋಕ ದೊಡಮನಿ(40) ಪ್ರದೀಪ ಶಿವಬಸಪ್ಪ ಕರೋಶಿ(20), ಅಭಿಜಿತ ದೇವನ(22) ರೇಖಾ ರಾಜು ಮಾಸ್ತಿಹೋಳಿ(35), ಕಮಲಾ ಕೋಮಲ ಕಟಗೋಳ(35).

ಐವರ ದುರ್ಮರಣ: ಕುಣಿಗಲ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್ ಚೊಟ್ಟನಹಳ್ಳಿ ಗ್ರಾಮದ ಬಳಿ ಸ್ವಿಫ್ಟ್ ಕಾರ್‌ನ ಮುಂಭಾಗದ ಚಕ್ರ ಸಿಡಿದು 40 ಅಡಿ ಸೇತುವೆ ಕೆಳಗಿನ ತೊರೆಗೆ ಬಿದ್ದು ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 8 ತಿಂಗಳ ಮಗು ಕೂಡಾ ಸೇರಿದೆ. ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಮಂಜುನಾಥ್(35), ಪುಷ್ಪಲತಾ (30), ಅನಿತಾ(25) , ಪ್ರೀತಮ್(4) ಹಾಗೂ ಎಂಟು ತಿಂಗಳ ಗಂಡುಮಗು(ಹೆಸರು ತಿಳಿದು ಬಂದಿಲ್ಲ) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ಬಾಗಲಗುಂಟೆ ನಿವಾಸಿಗಳು. ಗಾಯಗೊಂಡ ಮೂವರಲ್ಲಿ 4 ವರ್ಷದ ಮಗು ಇದೆ. ಇವರೆಲ್ಲರೂ ಸ್ಪಿಫ್ಟ್ ಕಾರಿನಲ್ಲಿ ತಮ್ಮ ಸ್ವಗ್ರಾಮವಾದ ಹಾಸನದ ಬಾಗೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ. ಸ್ಥಳಕ್ಕೆ ಕುಣಿಗಲ್ ಡಿವೈಎಸ್‌ಪಿ ಉಮಾರಾಣಿ, ಸಿಪಿಐ ಧರ್ಮೇಂದ್ರ, ಪಿಎಸ್‌ಐ ಗುರುಪ್ರಸಾದ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

 ಏನಾಯಿತು?
ಟೈರ್ ಸ್ಫೋಟಗೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಲಾರಿ ಪಲ್ಟಿ. ಅದಕ್ಕೆ ಐದು ವಾಹನಗಳ ಡಿಕ್ಕಿ

 ಎಷ್ಟು ಸಾವು?
9 ಸಾವು, 9 ಮಂದಿಗೆ ಗಾಯ

 ಎಲ್ಲಿ?
ಬೆಳಗಾವಿಯ ವಂಟಮೂರಿ ಘಾಟಿ ಬಳಿ

ಏನಾಯಿತು?
ಟೈರ್ ಸಿಡಿದು ಸೇತುವೆ ಕೆಳಗೆ ಬಿದ್ದ ಕಾರು

 ಎಷ್ಟು ಸಾವು?
8 ತಿಂಗಳ ಮಗು ಸೇರಿ 5 ಸಾವು

 ಎಲ್ಲಿ?
ಕುಣಿಗಲ್‌ನ ಚೊಟ್ಟನಹಳ್ಳಿ ಗ್ರಾಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.