ಪ್ರಧಾನ ಸುದ್ದಿ

ಬ್ಯಾಂಕಲ್ಲೇ ಖೋಟಾ ನೋಟು

ಬ್ಯಾಂಕಲ್ಲೇ ಖೋಟಾ ನೋಟು
Published On :

ಬಸವನಬಾಗೇವಾಡಿ: ತಾಲೂಕಿನ ನಿಡಗುಂದಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಗ್ರಾಹಕರಿಗೆ ನಕಲಿ ನೋಟುಗಳನ್ನು ನೀಡಿರುವ ಬಗ್ಗೆ ವರದಿಯಾಗಿದೆ.
ಬ್ಯಾಂಕ್ ಸಿಬ್ಬಂದಿಯೇ ನಕಲಿ ನೋಟು ನೀಡಿದ್ದಾರೆಂದು ಆರೋಪಿಸಿ ಗ್ರಾಹಕರು, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ಶನಿವಾರ ಜರುಗಿದೆ.
ತಾಲೂಕಿನ ಉಣ್ಣಿಬಾವಿ ಗ್ರಾಮದ ಸುರೇಶ ನರಸರೆಡ್ಡಿ ಎಂಬುವರು ರು. 94 ಸಾವಿರ ಬ್ಯಾಂಕ್‌ನಿಂದ ಶನಿವಾರ ಡ್ರಾ ಮಾಡಿಕೊಂಡರು. ಅವರು ಪಡೆದ ಹಣವನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಸಾವಿರ ರು. ಮೌಲ್ಯದ ಎರಡು ನೋಟುಗಳು ನಕಲಿ ಎಂದು ಅವರಿಗೆ ಕಂಡುಬಂದಿವೆ. ಕೂಡಲೇ ಎಚ್ಚೆತ್ತ ಇನ್ನಿತರ ಗ್ರಾಹಕರು ತಾವು ಪಡೆದ ಹಣವನ್ನು ಪರಿಶೀಲಿಸಿದಾಗ ಒಟ್ಟು 33 ನಕಲಿ ನೋಟುಗಳು ಕಂಡು ಬಂದಿವೆ. ಇದರಿಂದ ಕೆರಳಿದ ಗ್ರಾಹಕರು ನಾವೇನಾದರೂ ಈ ರೀತಿ ನೀಡಿದ್ದರೆ, ಪೊಲೀಸರಿಗೆ ತಿಳಿಸುತ್ತಿದ್ದ ಬ್ಯಾಂಕ್ ಸಿಬ್ಬಂದಿ, ಈಗ ಬ್ಯಾಂಕ್‌ನವರೇ ನಕಲಿ ನೋಟು ನೀಡಿದರೆ ಅದನ್ನು ಗಮನಿಸುವವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಸಿಬ್ಬಂದಿ ಅವುಗಳನ್ನು ವಾಪಸ್ ಪಡೆದು ಬೇರೆ ನೋಟು ನೀಡಿದ್ದಾರೆ.

ದೂರು ನೀಡಿಲ್ಲ
ಇದುವರೆಗೂ ಬ್ಯಾಂಕ್ ಸಿಬ್ಬಂದಿಯಾಗಲಿ, ಗ್ರಾಹಕರಾಗಲಿ ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂದು ನಿಡಗುಂದಿ ಪಿ.ಎಸ್.ಐ. ಎಂ.ಬಿ. ಚಿಕ್ಕಣ್ಣವರ ಹೇಳಿದರು.

ಪರಿಶೀಲಿಸಿ ಕ್ರಮ

ಗ್ರಾಹಕರಿಂದ ಪಡೆಯಲಾದ ಈ ನೋಟುಗಳು ನಕಲಿಯೋ, ಅಸಲಿಯೋ ಎಂಬುದು ಗೊತ್ತಾಗುತ್ತಿಲ್ಲ. ನಕಲಿ ನೋಟು ಪರಿಶೀಲಿಸುವ ಯಂತ್ರ ಆಲಮಟ್ಟಿಯ ಶಾಖೆಯಲ್ಲಿದೆ. ಸೋಮವಾರ ನಕಲಿ ಎಂದು ಶಂಕಿಸಲಾದ ನೋಟುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಆರ್.ಎಸ್. ಜೋಶಿ,
ನಿಡಗುಂದಿ ಎಸ್.ಬಿ.ಐ. ಅಸಿಸ್ಟೆಂಟ್ ಮ್ಯಾನೇಜರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.