

ಚೆನ್ನೈ: ಡಿಎಂಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಆರೋಪಿಸಿ ಮಾಜಿ ಕೇಂದ್ರ ಸಚಿವ ಡಿ. ನೆಪೋಲಿಯನ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಪದಚ್ಯುತಗೊಂಡ ಡಿಎಂಕೆ ನಾಯಕ ಎಂ.ಕೆ ಅಳಗಿರಿ ಅವರ ಬೆಂಬಲಿಗನಾಗಿದ್ದ ನೆಪೋಲಿಯನ್ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಗೆ ಸೇಪಡೆಯಾದ ನಂತರ ಮಾತನಾಡಿದ ನೆಪೋಲಿಯನ್, ಡಿಎಂಕೆಯಲ್ಲಿ ಪ್ರಜಾಪ್ರಭುತ್ವವೆಂಬುದೇ ಇರಲಿಲ್ಲ. ಅಲ್ಲಿ ಚುನಾವಣೆಯೂ ಸರಿಯಾದ ರೀತಿಯಲ್ಲಿ ನಡೆಯುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.
ಚೆನ್ನೈಯಲ್ಲಿ ಶಾ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಈ ವೇಳೆ ಗೀತೆ ರಚನೆಕಾರ ಗಂಗೈ ಅಮರನ್ ಮತ್ತು ನೃತ್ಯ ನಿರ್ದೇಶಕರ ಗಾಯತ್ರಿ ರಘುರಾಮ್ ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
2009-2012ರ ಅವಧಿಯ ಯುಪಿಎ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿದ್ದರು ನೆಪೋಲಿಯನ್.