ನಮೋ-ರಾಗಾ ಮತ್ತೆ ವಾಕ್ಸಮರ

ಗುಜರಾತ್ನ ಬಾರ್ಡೊಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಸ್ಸಾಂನ ಗುವಾಹಟಿ, ಮಣಿಪುರದ ಇಂಫಾಲ್ನಲ್ಲಿ ನರೇಂದ್ರ ಮೋದಿ ಪ್ರಚಾರ ಭಾಷಣ
23 ವರ್ಷಗಳಿಂದ ಇಲ್ಲಿನ ವ್ಯಕ್ತಿಯೊಬ್ಬರು ರಾಜ್ಯಸಭೆ ಪ್ರತಿನಿಧಿಸುತ್ತಿದ್ದಾರೆ. 10 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಆದರೆ ನಿಮ್ಮ ರಾಜ್ಯಕ್ಕೆ ಅವರೇನು ಮಾಡಿದ್ದಾರೆ? ಅಟಲ್ ಪಿಎಂ ಆಗಿದ್ದ ವೇಳೆ ಈ ಪ್ರದೇಶ ಮುಂದುವರಿದಿತ್ತು.
ಈಶಾನ್ಯ ರಾಜ್ಯಗಳಲ್ಲೇ ಅಸ್ಸಾಂ ತೀರಾ ಹಿಂದುಳಿದ ಪ್ರದೇಶವಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನಾಯಕರು. ಅವರು ಇಲ್ಲಿನ ಮುಖ್ಯಮಂತ್ರಿಗಳನ್ನು ಶಿಲಾನ್ಯಾಸಕ್ಕೆ, ಉದ್ಘಾಟನೆಗೆ ಕರೆಯುತ್ತಾರೆ. ಬಳಿಕ ವಹಿಸಿಕೊಂಡ ಕೆಲಸ ಮರೆಯುತ್ತಾರೆ.
60 ವರ್ಷಗಳಿಂದ ಕಾಂಗ್ರೆಸ್ ಸಹಿಸಿಕೊಂಡು ಬರುತ್ತಿದ್ದೀರಿ. ಇನ್ನೂ ಎಷ್ಟು ವರ್ಷ ಸಹಿಸಿಕೊಳ್ಳುತ್ತೀರಿ? ನಮಗೆ 60 ತಿಂಗಳ ಅವಕಾಶ ಕೊಡಿ, ನಿಮ್ಮ ಆಸೆಗಳನ್ನು ಯಾವ ರೀತಿ ಈಡೇರಿಸುತ್ತೇವೆ ನೋಡಿ. ಇನ್ನು 100 ದಿನ ಅಷ್ಟೇ ಕಾಂಗ್ರೆಸ್ ಅಧಿಕಾರ ತ್ಯಜಿಸುವುದು ಪಕ್ಕಾ.
ಅರುಣಾಚಲದ ವಿದ್ಯಾರ್ಥಿಯೊಬ್ಬರು ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಆದರೆ ಈ ಬಗ್ಗೆ ಚಿಂತಿಸಲು ದೆಹಲಿ, ಕೇಂದ್ರ ಸರ್ಕಾರಕ್ಕೆ ಸಮಯವಿಲ್ಲ. ಇದಕ್ಕೆ ಬದಲಾಗಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇನ್ನಾದರೂ ಹಲ್ಲೆಯಂಥ ಕೃತ್ಯಗಳು ನಿಲ್ಲಬೇಕು.
ಸರ್ದಾರ್ ಪಟೇಲ್ ಆರ್ಎಸ್ಸೆಸ್ ಸಿದ್ಧಾಂತವನ್ನು ವಿಷ ಎಂದು ಕರೆದಿದ್ದರು. ಇದನ್ನೇ ಅಳವಡಿಸಿಕೊಂಡಿದ್ದವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನೇ ಕೊಂದರು. ಆದರೆ ಪಟೇಲ್ ಸಿದ್ಧಾಂತವನ್ನು ಬದಿಗೊತ್ತಿರುವ ಇಲ್ಲಿನ ನಾಯಕ ಕೇವಲ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಮೋದಿ ಮನಸ್ಸಿಗೆ ಏನು ತೋಚುತ್ತದೆಯೋ ಅದನ್ನೆಲ್ಲಾ ಮಾತನಾಡುತ್ತಾರೆ. ಕೆಲವೊಮ್ಮೆ ಇದು ಸತ್ಯವಾಗಿಲ್ಲದಿದ್ದರೂ ಸಹ. ಆದರೆ ಕಾಂಗ್ರೆಸ್ ಇರುವುದೇ ಭ್ರಷ್ಟಾಚಾರ ವಿರೋಧಿಸಲು. ಇವರು ಭ್ರಷ್ಟಾಚಾರ ವಿರೋಧಿಗಳು ಎನ್ನುತ್ತಾರೆ. ಆದರೆ ಇಲ್ಲಿ ಲೋಕಾಯುಕ್ತರೇ ಇರಲಿಲ್ಲ.
ಇಲ್ಲಿನ ನಾಯಕ ಪಟೇಲ್ ಬಗ್ಗೆ ಮಾತನಾಡುತ್ತಾರೆ. ಪ್ರತಿಮೆ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಆದರೆ ಅವರು ಇತಿಹಾಸ ಓದಿಲ್ಲ ಎಂದೆನಿಸುತ್ತೆ. ಅವರ ಸಿದ್ಧಾಂತಗಳ ಬಗ್ಗೆ ಅರ್ಥ ಮಾಡಿಕೊಂಡಿಲ್ಲ.
ಗುಜರಾತ್ ಸರ್ಕಾರ ಇರುವುದೇ ಶ್ರೀಮಂತರಿಗಾಗಿ. ಮೋದಿ ಶಿಕ್ಷಣಕ್ಕಾಗಿ ಏನೂ ಮಾಡಿಲ್ಲ. ಹೀಗಾಗಿಯೇ 13 ಸಾವಿರ ಶಾಲೆಗಳು ಮುಚ್ಚಿವೆ. ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಾರಲ್ಲ. ಹೀಗಾದರೆ ಹಣ ವೆಚ್ಚ ಮಾಡಿದ್ದು ಯಾರಿಗಾಗಿ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


