ಪ್ರಧಾನ ಸುದ್ದಿ

20ರೊಳಗೆ ಜಿಪಿಎಸ್ ಕಡ್ಡಾಯ

20ರೊಳಗೆ ಜಿಪಿಎಸ್ ಕಡ್ಡಾಯ
Published On :

ನವದೆಹಲಿ: ಫೆ.20ರೊಳಗೆ ಜಿಪಿಎಸ್ ಸಾಧನ ಅಳವಡಿಸಿ.
 ಇದು ಕೇಂದ್ರ ಸರ್ಕಾರ ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೀಡಿರುವ ಗಡುವು. 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ಪ್ರಮುಖ ನಗರಗಳಲ್ಲಿ ಸಂಚರಿಸುವ ವಾಹನಗಳು ಜಿಪಿಎಸ್ ವ್ಯವಸ್ಥೆ ಹೊಂದಿರಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ಆದೇಶ ನೀಡಿದೆ.
ಪಾಲಿಸದಿದ್ದರೆ ಕ್ರಮ: ಸಾರ್ವಜನಿಕ ಸಾರಿಗೆ ವಾಹನಗಳ ಮಾಲೀಕರು 20ರೊಳಗೆ ತಮ್ಮ ವಾಹನಗಳಲ್ಲಿ ಜಿಪಿಎಸ್(ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅಳವಡಿಸಬೇಕು. ತಪ್ಪಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವಾಲಯ ಎಚ್ಚರಿಕೆ ನೀಡಿದೆ. ಈ ಹಿಂದೆ ಜಿಪಿಎಸ್ ಅಳವಡಿಕೆಗೆ 2013ರ ಸೆ.30ರ ಗಡುವು ನೀಡಲಾಗಿತ್ತು.
ಸುರಕ್ಷತೆಗೆ: ಮಹಿಳೆಯರ ಸುರಕ್ಷತೆಗಾಗಿ  ಸಾರ್ವಜನಿಕ ಸಾರಿಗೆಗಳಲ್ಲಿ ಜಿಪಿಎಸ್ ಅಳವಡಿಕೆ,  ಅಲಾರಾಂ ಬಟನ್ ಅಳವಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ವಾಹನಗಳನ್ನು ಟ್ರ್ಯಾಕ್ ಮಾಡಲು, ಅವುಗಳ ಮೇಲೆ ನಿಗಾಕ್ಕೆ ಕೇಂದ್ರ ಸರ್ಕಾರ 1,405 ಕೋಟಿಯ ಯೋಜನೆಗೆ ಒಪ್ಪಿಗೆ ನೀಡಿತ್ತು. ಇದರಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯವೂ ಸೇರಿದ್ದು, ಈ ಯೋಜನೆ ನಿರ್ಭಯಾ ನಿಧಿಯ ಒಂದು ಅಂಗ. 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಘಟನೆಯ ಬಳಿಕ ಸರ್ಕಾರ  ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ವಿವಿಧ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿತ್ತು.

ಏನಿದು ವ್ಯವಸ್ಥೆ?
ಇದು ಉಪಗ್ರಹ ಆಧರಿತ ವ್ಯವಸ್ಥೆ. ವಾಹನಗಳಾಗಲೀ, ವ್ಯಕ್ತಿಯಾಗಲೀ, ಇತರೆ ಸ್ಥಳಗಳಾಗಲೀ ಹೀಗೆ ಜಿಪಿಎಸ್ ಸಾಧನವನ್ನು ಎಲ್ಲಿ ಅಳವಡಿಸಲಾಗಿದೆಯೋ ಆ ಪ್ರದೇಶವನ್ನು ಇದರ   ಮೂಲಕ ಕಂಡುಹಿಡಿಯಲು ಸಾಧ್ಯ. ಒಂದು ವಾಹನಕ್ಕೆ ಜಿಪಿಎಸ್ ಅಳವಡಿಸಿದೆಯೆಂದರೆ, ನೀವು  ಜಿಪಿಎಸ್ ಮೂಲಕ ಆ ವಾಹನ ಯಾವ ಪ್ರದೇಶದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿ ಪಡೆಯಬಹುದಾಗಿದೆ. ವಾಹನಗಳಲ್ಲಿ ಸಂಚರಿಸುವಾಗ ಏನಾದರೂ ಅಪಾಯ ಆದರೆ ಮಹಿಳೆಯರು ವಾಹನದಲ್ಲಿನ ಅಲಾರಾಂ ಗುಂಡಿ ಒತ್ತಬಹುದು. ಆಗ ಜಿಪಿಎಸ್ ಟ್ರ್ಯಾಕಿಂಗ್ ಸಾಧನದ ಮೂಲಕ ಪೊಲೀಸರು ರಕ್ಷಣಾ ಕ್ರಮ ಕೈಗೊಳ್ಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.