ದೇಶಕ್ಕಾಗಿ ಬದುಕೋಣ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾಗುವ ಅವಕಾಶ ನಮಗೆ ಸಿಕ್ಕದೇ ಹೋಗಿರಬಹುದು. ಆದರೆ, ದೇಶಕ್ಕಾಗಿ ಬದುಕುವ ಉತ್ತಮ ಅವಕಾಶ ಸಿಕ್ಕಿದೆ.
-ರಾಷ್ಟ್ರದ 14ನೇ ಪ್ರಧಾನಿಯಾಗಿ ಮೇ 26ರಂದು ಸಂಜೆ 6ಕ್ಕೆ ನರೇಂದ್ರಮೋದಿ ಪ್ರಮಾಣ ವಚನ ಸ್ವೀಕಾರ. 2 ಡಜನ್ ಸಚಿವರು ಪ್ರಮಾಣ ಸ್ವೀಕರಿಸುವ ನಿರೀಕ್ಷೆ.
-ಸಂಸತ್ತಿನ ಸೆಂಟ್ರಲ್ಹಾಲ್ನಲ್ಲಿ ಪ್ರತ್ಯೇಕವಾಗಿ ಬಿಜೆಪಿ ಸಂಸದೀಯ ಸಭೆ ಮತ್ತು ಎನ್ಡಿಎ ಸಂಸದೀಯ ಸಭೆ
-ಬಿಜೆಪಿ ಮತ್ತು ಎನ್ಡಿಎ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಮಂಗಳವಾರ ಆಯ್ಕೆ.
-ರಾಷ್ಟ್ರಪತಿ ಪ್ರಣವ್ರನ್ನು ಭೇಟಿ ಮಾಡಿದ ಮೋದಿ ಅವರಿಂದ ಸರ್ಕಾರ ರಚಿಸುವ ಔಪಚಾರಿಕ ಹಕ್ಕು ಮಂಡನೆ.
-ರಾಷ್ಟ್ರಪತಿಯಿಂದ ಸರ್ಕಾರ ರಚಿಸಲು ಆಹ್ವಾನ. ಪ್ರಮಾಣ ಸ್ವೀಕಾರ ದಿನ, ಸಮಯ ತಿಳಿಸಿದ ನಿಯೋಜಿತ ಪ್ರಧಾನಿ.
-ರಾಷ್ಟ್ರಪತಿ ಭವನದ ಹೊರ ಆವರಣದಲ್ಲಿ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭ. 3000ಕ್ಕೂ ಹೆಚ್ಚು ಆಹ್ವಾನಿತರು ಪಾಲ್ಗೊಳ್ಳುವ ನಿರೀಕ್ಷೆ.
-ಇದಕ್ಕೂ ಮುನ್ನ ಎನ್ಡಿಎ ಅಧ್ಯಕ್ಷ ಆಡ್ವಾಣಿ ನೇತೃತ್ವದ ನಿಯೋಗದಿಂದ ರಾಷ್ಟ್ರಪತಿಗಳ ಭೇಟಿ, ಮೋದಿ ಎನ್ಡಿಎ ಸಂಸದೀಯ ಪಕ್ಷದ ನಾಯಕ ಎಂಬ ಬಗ್ಗೆ ವಿವರ.
ನಮೋಪದ
-ಜನ ಮತ ನೀಡಿರುವುದು ಹೊಸ ಭರವಸೆ, ವಿಶ್ವಾಸಕ್ಕೆ. ಅವನ್ನು ತಲುಪಲು ಏನೆಲ್ಲ ಸಾಧ್ಯವೊ ಅದನ್ನು ಮಾಡುವೆ.
-ಹಿಂದೆ ಏನಾಗಿತ್ತು ಎನ್ನುವುದನ್ನು ಮರೆತುಬಿಡಿ. ನಾವು ಇನ್ನು ಚಿಂತಿಸುವ ಅಗತ್ಯವಿಲ್ಲ.
-ನನ್ನ ಸರ್ಕಾರ ನನಗಾಗಿ ಅಲ್ಲ, ನನ್ನ ದೇಶಕ್ಕಾಗಿ. ಸರ್ಕಾರ ಇರುವುದು ಬಡವರಿಗಾಗಿ ಮತ್ತು ಅವರಿಗಾಗಿ ಏನಾದರೂ ಮಾಡಬೇಕು ಎನ್ನುವುದು ನಮ್ಮ ಅಪೇಕ್ಷೆ.
-ಕೋಟಿ ಕೋಟಿ ಯುವಕರ ಆಶೋತ್ತರ, ಸಹೋದರಿಯರು ಮತ್ತು ಮಾತೆಯರ ಭದ್ರತೆ, ಸುರಕ್ಷತೆ; ಗ್ರಾಮೀಣರು, ದಮನಿತರ ಅಭಿವೃದ್ಧಿಗೆ ನಮ್ಮ ಸರ್ಕಾರ ಮುಡಿಪು.
-ನನ್ನ ಸರ್ಕಾರ ಏನು ಮಾಡುತ್ತಿದೆ ಎನ್ನುವ ಬಗ್ಗೆ ಯಾರೂ ಬೊಟ್ಟು ಮಾಡಬಾರದು. ಆ ರೀತಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸಲಿದೆ.
-ಪ್ರತಿ ಸರ್ಕಾರ, ನೇತಾರರು ದೇಶದ ಪ್ರಗತಿಗೆ ಕೊಡುಗೆ ನೀಡಿವೆ. ಹಿಂದಿನ ಸರ್ಕಾರಗಳ ಒಳ್ಳೆಯ ಯೋಜನೆಗಳನ್ನು ನನ್ನ ಸರ್ಕಾರ ಮುಂದುವರಿಸಿಕೊಂಡು ಹೋಗಲಿದೆ.
-ಒಬ್ಬ ಬಡವನ ಮಗ ಇವತ್ತು ಪ್ರಧಾನಿಯಾಗುತ್ತಿದ್ದಾನೆ. ಇದು ನಮ್ಮ ಸಂವಿಧಾನದ ಅತಿದೊಡ್ಡ ಶಕ್ತಿ. ದೊಡ್ಡ ವ್ಯಕ್ತಿ ಎನ್ನುವ ಕಾರಣದಿಂದ ಮೋದಿ ನಿಮ್ಮೆದುರು ನಿಂತಿಲ್ಲ. ಪಕ್ಷದ ಹಿರಿಯ ನಾಯಕರು ನನ್ನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಈ ಮಟ್ಟಕ್ಕೆ ಬೆಳೆಸಿದ್ದಾರೆ.
-ನಾವು ಆಶಾವಾದಿಯಾಗಿರಬೇಕು ಎನ್ನುವುದೇ ಇಡೀ ದೇಶಕ್ಕೆ ನಾನು ಹೇಳಲು ಬಯಸಿರುವ ಮಾತು. ಒಬ್ಬೊಬ್ಬ ಭಾರತೀಯ ಒಂದೊಂದು ಹೆಜ್ಜೆ ಮುಂದಿಟ್ಟರೂ ದೇಶ 125 ಕೋಟಿ ಹೆಜ್ಜೆ ಮುಂದೆ ಇಟ್ಟಂತೆ ಆಗುತ್ತದೆ.
-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಸಂಸತ್ತಿನ ಸೆಂಟ್ರಲ್ಹಾಲ್ನಲ್ಲಿ ಪ್ರತ್ಯೇಕವಾಗಿ ಬಿಜೆಪಿ ಸಂಸದೀಯ ಸಭೆ ಮತ್ತು ಎನ್ಡಿಎ ಸಂಸದೀಯ ಸಭೆ ಮಂಗಳವಾರ ನಡೆಯಿತು. ಉಭಯ ಸಭೆಗಳಲ್ಲೂ ನರೇಂದ್ರಮೋದಿ ನಾಯಕರಾಗಿ ಆಯ್ಕೆಯಾದರು. ತಮ್ಮನ್ನು ಆಯ್ಕೆ ಮಾಡಿದ ಎಲ್ಲ ಸಂಸದರಿಗೆ ಕೃತಜ್ಞತೆ ಸಲ್ಲಿಸಿದ ನರೇಂದ್ರಮೋದಿ ತಮ್ಮ ಭಾಷಣದುದ್ದಕ್ಕೂ ಭಾವುಕರಾಗಿದ್ದರು.
ಒಂದು ಹಂತದಲ್ಲಿ ಅವರ ಭಾವನೆ ಕಟ್ಟೆಯೊಡೆದು ಕಣ್ಣೀರು ಚಿಮ್ಮಿದವು. ಬಿಕ್ಕಳಿಸಿ ಬಂದ ಅಳುವನ್ನು ತಡೆದು ಭಾವನೆಗಳಿಗೆ ಕಡಿವಾಣ ಹಾಕಿದ ಮೋದಿ ಕೆಲ ಕ್ಷಣದ ಮೌನದ ನಂತರ ಗದ್ಗದಿತ ದನಿಯಲ್ಲೇ ಮಾತು ಮುಂದುವರೆಸಿದರು. ಇದಕ್ಕೂ ಮುನ್ನ ಸಭೆ ಪ್ರಾರಂಭವಾದ ಕೂಡಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ಸಿಂಗ್ ಅವರು ಸಂಸದೀಯ ಪಕ್ಷದ ನಾಯಕನ ಆಯ್ಕೆಗೆ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಎನ್ಡಿಎ ಅಧ್ಯಕ್ಷ ಲಾಲ್ಕೃಷ್ಣ ಆಡ್ವಾಣಿ, ಬಿಜೆಪಿ ಸಂಸದೀಯ ಪಕ್ಷದ ನಾಯಕರನ್ನಾಗಿ ನರೇಂದ್ರ ಮೋದಿ ಹೆಸರನ್ನು ಪ್ರಸ್ತಾಪಿಸಿದರು. ಹಿರಿಯ ನಾಯಕರಾದ ಮುರುಳಿ ಮನೋಹರ ಜೋಷಿ, ವೆಂಕಯ್ಯನಾಯ್ಡು, ನಿತಿನ್ಗಡ್ಕರಿ, ಸುಷ್ಮಾಸ್ವರಾಜ್, ಅರುಣ್ಜೆಟ್ಲಿ, ಕರಿಯಾ ಮುಂಡ, ಗೋಪಿನಾಥ್ ಮುಂಡೆ, ರವಿಶಂಕರ್ ಪ್ರಸಾದ್, ಮುಕ್ತಾರ್ ಅಬ್ಬಾಸ್ ನಕ್ವಿ ಅವರು ಆಡ್ವಾಣಿ ಪ್ರಸ್ತಾವವನ್ನು ಅನುಮೋದಿಸಿದರು. ಹತ್ತು ನಿಮಿಷಗಳಲ್ಲಿ ಈ ಔಪಚಾರಿಕ ಪ್ರಕ್ರಿಯೆ ಮುಗಿಯಿತು. ರಾಜನಾಥ್ ಸಿಂಗ್ ಅವರು ನರೇಂದ್ರಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕ ಎಂದು ಘೋಷಿಸಿದರು. ತಕ್ಷಣವೇ ಸೆಂಟ್ರಲ್ ಹಾಲ್ನಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ಗೌರವಿಸಿ ಕರಡಾತನ ಮಾಡಿದರು. ಈ ಹಂತದಲ್ಲೂ ನರೇಂದ್ರಮೋದಿ ಕಣ್ಣಾಲಿಗಳು ತೆಳುವಾಗಿ ತುಂಬಿದ್ದವು.
-ಶಿರಬಾಗಿದ ನರೇಂದ್ರ
ಸೆಂಟ್ರಲ್ಹಾಲ್ಗೆ ಪ್ರವೇಶಿಸುವ ಮುನ್ನ ನರೇಂದ್ರಮೋದಿ ಸಂಸತ್ದೇಗುಲದ ಪ್ರವೇಶದ್ವಾರದಲ್ಲಿ ಶಿರಭಾಗಿ ನಮಸ್ಕರಿಸಿದರು. 11.55ಕ್ಕೆ ನರೇಂದ್ರಮೋದಿ ಸೇರಿದಂತೆ ಎಲ್ಲರೂ ಆಗಮಿಸಿದ್ದರು. 12ಗಂಟೆಗೆ ರಾಜನಾಥ್ ಸಿಂಗ್ ಸಭಾ ಕಾರ್ಯಕ್ರಮ ಆರಂಭಿಸಿದರು. ನರೇಂದ್ರಮೋದಿ ಅವರು ಇದೇ ಮೊದಲ ಬಾರಿಗೆ ಸೆಂಟ್ರಲ್ ಹಾಲ್ ಪ್ರವೇಶಿಸುತ್ತಿದ್ದಾರೆ ಎಂದು ರಾಜನಾಥ್ಸಿಂಗ್ ಹೇಳಿದಾಗಲೂ ಸಭೆಯಲ್ಲಿ ಭಾರಿ ಕರತಾಡನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


