ಮೋದಿ ಭೇಟಿ ಮಾಡಿ ಥ್ರಿಲ್ ಆದ ಬ್ರೆಟ್ ಲೀ

ಸಿಡ್ನಿಯ ಆಲ್ಪೊಂಸ್ ಅರೇನಾದಲ್ಲಿ ಮೋದಿ ಅವರನ್ನು ಭೇಟಿ ಮಾಡಲು ಭಾರತೀಯರಷ್ಟೆ...
ಟ್ವಿಟ್ಟರ್ ನಲ್ಲಿ ಬ್ರೆಟ್ ಲೀ ಹಂಚಿಕೊಂಡ ಮೋದಿ ಅವರ ಭೇಟಿಯ ಕ್ಷಣ
ಟ್ವಿಟ್ಟರ್ ನಲ್ಲಿ ಬ್ರೆಟ್ ಲೀ ಹಂಚಿಕೊಂಡ ಮೋದಿ ಅವರ ಭೇಟಿಯ ಕ್ಷಣ

ಸಿಡ್ನಿ: ಸಿಡ್ನಿಯ ಆಲ್ಪೊಂಸ್ ಅರೇನಾದಲ್ಲಿ ಮೋದಿ ಅವರನ್ನು ಭೇಟಿ ಮಾಡಲು ಭಾರತೀಯರಷ್ಟೆ   ನೆರೆದಿರಲಿಲ್ಲ. ಅಲ್ಲಿಗೆ ಮೋದಿ ಮ್ಯಾಜಿಕ್ ನೋಡಲು ಬಂದದ್ದು ಖ್ಯಾತ ಆಸ್ಟ್ರೇಲಿಯ ಕ್ರಿಕೆಟ್ ತಾರೆ ಬ್ರೆಟ್ ಲೀ ಕೂಡ ಒಬ್ಬರು.

ಮೋದಿ ಅವರನ್ನು ಭೇಟಿ ಮಾಡಲು ಬಂದಿದ್ದ ಬ್ರೆಟ್ ಲೀ ಅವರಿಗೆ ಭಾರತವೇಕೆ ಇಷ್ಟ ಎಂಬ ಪ್ರಶ್ನೆಗೆ "ಭಾರತ ನನ್ನ ಹೃದಯಕ್ಕೆ ಹತ್ತಿರ. ಅಲ್ಲಿಗೆ ಇಲ್ಲಿಯವರೆಗೂ ಸುಮಾರು ೮೦ ಬಾರಿ ಬಂದಿದ್ದೇನೆ. ನನಗೆ ಭಾರತೀಯ ಸಂಸ್ಕೃತಿ ಇಷ್ಟ ಎಂದಿದ್ದಾರೆ."

ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ಬ್ರೆಟ್ ಲೀ "ಒಲಂಪಿಕ್ ಪಾರ್ಕ್ ನಲ್ಲಿ ಮೋದಿಯವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಕಾಯಲಾಗುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com