ಮಾತುಕತೆಗೆ ಸಿದ್ಧರಿದ್ದೇವೆ, ಆದರೆ ಚೆಂಡು ಭಾರತದ ಅಂಗಳದಲ್ಲಿದೆ:ನವಾಜ್ ಶರೀಫ್

ಇಸ್ಲಾಮಾಬಾದ್ ಭಾರತದ ಜೊತೆ ಮಾತುಕತೆ ನಡೆಸಲು ಸಿದ್ಧವಿದೆ, ಆದರೆ ಚೆಂಡು ಭಾರತದ ...
ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಕಾಠ್ಮಂಡುವಿಗೆ ಬಂದಿಳಿದ ನವಾಜ್ ಶರೀಫ್
ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಕಾಠ್ಮಂಡುವಿಗೆ ಬಂದಿಳಿದ ನವಾಜ್ ಶರೀಫ್
Updated on: 

ಕಾಠ್ಮಂಡು: ಇಸ್ಲಾಮಾಬಾದ್ ಭಾರತದ ಜೊತೆ ಮಾತುಕತೆ ನಡೆಸಲು ಸಿದ್ಧವಿದೆ, ಆದರೆ ಚೆಂಡು ಭಾರತದ ಅಂಗಳದಲ್ಲಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್ ಹೇಳಿದ್ದಾರೆ.

೧೮ನೆ ಸಾರ್ಕ್ ಶೃಂಗಸಂಭೆಯಲ್ಲಿ ಭಾಗವಹಿಸಲು ನೇಪಾಳದ ರಾಜಧಾನಿಗೆ ಮಂಗಳವಾರ ಬಂದಿಳಿದ ನವಾಜ್ ಶರೀಫ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವರೆ ಎಂಬ ಪ್ರಶ್ನೆಗೆ ಉತ್ತರಿಸಿದರು.

"ಮಾತುಕತೆಯನ್ನು ರದ್ದುಪಡಿಸಿದ್ದು ನವದೆಹಲಿಯ ಏಕಪಕ್ಷೀಯ ನಿರ್ಧಾರ" ಎಂದಿರುವ ಪಾಕಿಸ್ತಾನದ ಪ್ರಧಾನಿ, "ಎರಡು ದೇಶಗಳ ನಡುವಿನ ಮಾತುಕತೆಯನ್ನು ಮುಂದುವರೆಸಲು, ಈಗ ಚೆಂಡು ಭಾರತದ ಅಂಗಳದಲ್ಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com