ಅಂತೂ ರದ್ದಾಯ್ತು ಬೇಡದ ಮಾತುಕತೆ

ತಿಂಗಳ ಹಿಂದಿನ ಭಯೋತ್ಪಾದನಾ ದಾಳಿಗಳು, ಕೊನೆಯ ಕ್ಷಣದ ಕಾಶ್ಮೀರಿ ಪ್ರತ್ಯೇಕತಾವಾ ದಿಗಳ ಭೇಟಿ ನಾಟಕ ನೀಡಿದ ಸುಳಿವಿನಂತೆ ಭಾರತ ಮತ್ತು ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‍ಎಸ್‍ಎ)ರ ನಡುವೆ ಆ.23ರಂದು ನಡೆಯಬೇಕಿದ್ದ ಮಾತುಕತೆ ರದ್ದಾಗಿದೆ...
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಎಜಾಜ್ (ಸಂಗ್ರಹ ಚಿತ್ರ)
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಎಜಾಜ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ತಿಂಗಳ ಹಿಂದಿನ ಭಯೋತ್ಪಾದನಾ ದಾಳಿಗಳು, ಕೊನೆಯ ಕ್ಷಣದ ಕಾಶ್ಮೀರಿ ಪ್ರತ್ಯೇಕತಾವಾ ದಿಗಳ ಭೇಟಿ ನಾಟಕ ನೀಡಿದ ಸುಳಿವಿನಂತೆ ಭಾರತ ಮತ್ತು ಪಾಕ್ ರಾಷ್ಟ್ರೀಯ ಭದ್ರತಾ  ಸಲಹೆಗಾರ (ಎನ್‍ಎಸ್‍ಎ)ರ ನಡುವೆ ಆ.23ರಂದು ನಡೆಯಬೇಕಿದ್ದ ಮಾತುಕತೆ ರದ್ದಾಗಿದೆ.

ಉಫಾದಲ್ಲಿ ಎರಡೂ ದೇಶಗಳ ಪ್ರಧಾನಿಗಳು ಹೊರಡಿಸಿದ ಜಂಟಿ ಹೇಳಿಕೆಯಂತೆ ಭಯೋತ್ಪಾದನೆಯನ್ನೇ ಪ್ರಮುಖವಾಗಿ ಚರ್ಚಿಸಬೇಕಿದ್ದ ಎನ್ ಎಸ್‍ಎ ಹಂತದ ಮಾತುಕತೆಯನ್ನು ರದ್ದು ಮಾಡಿರುವುದಾಗಿ ಪಾಕಿಸ್ತಾನವೇ ಘೋಷಿಸಿದೆ. ಭಾರತವೇ ಈ ಮಾತುಕತೆಯಿಂದ ಹಿಂದೆಸರಿಯಲಿ ಎಂದು ಕೊನೆಯ ಕ್ಷಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಎಳೆತಂದು ಪಾಕ್ ರಾದ್ಧಾಂತ ಎಬ್ಬಿಸಿತ್ತು. ಇದಕ್ಕೆ ಶನಿವಾರ ಸಂಜೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೀಡಿದ ಮಾತಿನ ಛಡಿಯೇಟು ನೆರೆಯ ದೇಶವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು.

ಇದರಿಂದ ಇಕ್ಕಟ್ಟಿಗೆ ಸಿಲುಕಿದ ಪಾಕ್ ತಾನೇ ಮಾತುಕತೆಯಿಂದ ಹಿಂದೆ ಸರಿಯುವ ನಿರ್ಧಾರ ಘೋಷಿಸಿತು. ಈ ಮೂಲಕ ಬಾಂಧವ್ಯ ವೃದ್ಧಿಯ ಮತ್ತೊಂದು ಅವಕಾಶಕ್ಕೆ ತಾನಾಗಿಯೇ  ಎಳ್ಳುನೀರು ಬಿಟ್ಟಿತು. ಇದಕ್ಕೂ ಮುನ್ನ ಕಾಶ್ಮೀರ ಪ್ರತ್ಯೇಕತಾ ವಾದಿಗಳ ವಿಚಾರ ಮುಂದಿಟ್ಟುಕೊಂಡು ಎನ್‍ಎಸ್‍ಎ ಹಂತದ ಮಾತುಕತೆಯನ್ನು ಅಡ್ಡದಾರಿ ಗೆಳೆಯಲು ಯತ್ನಿಸುತ್ತಿರುವ ಪಾಕ್‍ಗೆ ಭಾರತ ಶನಿವಾರ ಸುಷ್ಮಾ ಮೂಲಕ ಖಡಕ್ ಉತ್ತರ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com