ಪ್ರಧಾನ ಸುದ್ದಿ

ಒರಿಸ್ಸಾ: ನಾಲ್ಕು ವರ್ಷದ ಅಪ್ರಾಪ್ತೆಯನ್ನು ರೇಪ್ ಮಾಡಿದ ಯುವಕನ ಬಂಧನ

ಒರಿಸ್ಸಾ: ನಾಲ್ಕು ವರ್ಷದ ಅಪ್ರಾಪ್ತೆಯನ್ನು ರೇಪ್ ಮಾಡಿದ ಯುವಕನ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆರ್ಹಮಪುರ್: ಗಂಜಾಂ ಜಿಲ್ಲೆಯ ಭಂಜನಗರ ಪೊಲೀಸ್ ಠಾಣೆಯಿಂದ ೧೦೦ ಕಿ ಮೀ ದೂರದಲ್ಲಿರುವ ಮುಜ್ಜಗರ್ ನಲ್ಲಿ ನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿದ್ದಕ್ಕೆ ೨೨ ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಬಂಧಿತನಾಗಿರುವ ಆಪಾದಿತ ಮಿಥುನ್ ಗೌಡ, ಸಂತ್ರಸ್ತ ಬಾಲಕಿಯ ಪಕ್ಕದ ಮನೆಯವನು. ಬಾಲಕಿಯ ಮನೆಯವರು ಶುಕ್ರವಾರ ಯಾರೂ ಇಲ್ಲದ ಸಮಯದಲ್ಲಿ ಈ ದುಷ್ಕೃತ್ಯವೆಸೆದಿದ್ದಾನೆ ಎಂದು ಭಂಜನಗರ್ ಪೊಲೀಸ್ ಠಾಣೆಯಾ ಇನ್ಸ್ಪೆಕ್ಟರ್ ಎ ಕೆ ಸಾಹು ತಿಳಿಸಿದ್ದಾರೆ.

ಈ ನಿರುದ್ಯೋಗಿ ಯುವಕ, ಆ ಬಾಲಕಿಯನ್ನು ಆಟ ಆಡಿಸುವ ನೆಪದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಈ ಕೃತ್ಯವೆಸಗಿದ್ದಾನೆ ಎಂದಿದ್ದಾರೆ ಪೊಲೀಸರು.

ಆ ಸಂಸ್ತ್ರಸ್ತ ಬಾಲಕಿ ಮನೆಗೆ ಬಂದ ನಂತರ ನಡೆದ ಘಟನೆಯನ್ನು ವಿವರಿಸಿದಾಗ, ತಾಯಿ ರಾತ್ರಿ ನೆರೆಹೊರೆಯ ಸಾರ್ವಜನಿಕರಿಗೆ ಈ ವಿಷಯ ತಿಳಿಸಿದ್ದಾರೆ.

ಆಪಾದಿತನನ್ನು ನೆನ್ನೆ ಬಂಧಿಸಲಾಗಿದ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಹಾಗೆಯೇ ಸಂತ್ರಸ್ತ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.