ಪಾಕಿಸ್ತಾನದಲ್ಲಿ ಹಿಂಸೆಗೆ ತಿರುಗಿದ ಚಾರ್ಲಿ ಹೆಬ್ಡೋ ವಿರೋಧಿ ಪ್ರತಿಭಟನೆ

ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ ವಿರುದ್ಧದ ಪ್ರತಿಭಟನೆ ಹಿಂಸಾತ್ಮ ರೂಪ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕರಾಚಿ: ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ ವಿರುದ್ಧದ ಪ್ರತಿಭಟನೆ ಹಿಂಸಾತ್ಮ ರೂಪ ಪಡೆದು ಪಾಕಿಸ್ತಾನಿ ಪೊಲೀಸರು ಹಾರಿಸಿದ ಗುಂಡಿಗೆ ಒಬ್ಬ ತೀವ್ರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಅಧಿಕೃತ ಮಾಹಿತಿ ಇನ್ನೂ ಹೊರಬೀಳಬೇಕಿದೆ. ಫ್ರಾನ್ಸ್ ರಾಯಭಾರಿ ಕಛೇರಿ ಎದುರು ಸುಮಾರು ೨೦೦ ಪಾಕಿಸ್ತಾನಿ ಪ್ರತಿಭಟನಕಾರರು, ಪಾಕಿಸ್ತಾನದ ಪೋಲೀಸರ ಜೊತೆ ಶುಕ್ರವಾರ ಘರ್ಷಣೆಗೆ ಇಳಿದಿದ್ದಾರೆ.

ಪ್ರತಿಭಟನಕಾರರು ಪೋಲಿಸರತ್ತ ಕಲ್ಲುಗಳನ್ನು ಎಸೆದಿದ್ದಲ್ಲದೆ ಗುಂಡು ಹಾರಿಸಿದರು ಎಂದು ತಿಳಿದು ಬಂದಿದ್ದು, ಪೊಲೀಸರು ಮೊದಲಿಗೆ ಆಶ್ರುವಾಯುವಿನ ಮೊರೆ ಹೋಗಿದ್ದಾರೆ. ನಂತರ ಪೊಲೀಸರು ಪ್ರತಿಭಟನಕಾರರತ್ತ ಗುಂಡು ಹಾರಿಸಿದ್ದಾರೆ. ಈ ಘರ್ಷಣೆಯಲ್ಲಿ ಫೋಟೋಗ್ರಾಫರ್ ಒಬ್ಬನಿಗೆ ಗುಂಡಿನ ಗಾಯವಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com