

ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ, ಅದರಲ್ಲೂ ಲಷ್ಕರ್ ಎ ತೈಬಾ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳಿದೆ ಇನ್ನು ಭಾರತವೇ ಗುರಿ ಎಂದು ಲೋಕಸಭೆಯಲ್ಲಿ ಸರ್ಕಾರ ತಿಳಿಸಿದೆ. ಗೃಹ ಸಚಿವಾಲಯದ ರಾಜ್ಯ ಸಚಿವ ಹರಿಭಾಯ್ ಪ್ರತಿಭಾಯ್ ಚೌಧರಿ ಅವರು, ಪಾಕಿಸ್ತಾನದ ಐ ಎಸ್ ಐ ಅಲ್ಲಿನ ಭಯೋತ್ಪಾದಕರಿಗೆ ವಸತಿ, ತರಬೇತಿ ಮತ್ತು ಹಣಕಾಸಿನ ನೆರವು ನೀಡುತ್ತಿದೆ ಎಂದು ಸೆರೆ ಸಿಕ್ಕಿರುವ ಭಯೋತ್ಪಾದಕರು ಭದ್ರತಾ ಪಡೆಗಳಿಗೆ ತಿಳಿಸಿದ್ದಾರೆ ಎಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ.
"ಇಂಡೊ -ನೇಪಾಳ ಗಡಿ ಮತ್ತು ಇಂಡೋ-ಪಾಕ್ ಗಡಿ ಬಳಸಿ ಭಯೋತ್ಪಾದಕರು ಶಸ್ತ್ರಾಸ್ತಗಳು, ಸ್ಫೋಟಕಗಳನ್ನು ಭಾರತದ ವಿರುದ್ಧ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಸಾಗಿಸುತ್ತಿದ್ದಾರೆ" ಎಂದು ಲಿಖಿತ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ. ಐ ಎಸ್ ಐ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದರ ಬಗ್ಗೆ ಸಾಕ್ಷ್ಯಗಳನ್ನು ಸಂಪಾದನೆ ಮಾಡಿ ಪಾಕಿಸ್ತಾನ ಅಧಿಕಾರಿಗಳಿಗೆ ನೀಡಿದ್ದೇವೆ ಎಂದಿದ್ದಾರೆ. ಇದೇ ವೇಳೆಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕಾ ಸಂಘಟನೆಗಳ ಚಟಿವಟಿಕೆಗಳನ್ನು ತಡೆಯಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದಿದ್ದಾರೆ.