ಆಂಧ್ರ, ತೆಲಂಗಾಣ ಪ್ರಚಾರ ಮಾಡಲು ಅಮೆರಿಕಾಕ್ಕೆ ಹೊರಟ ನಾಯ್ಡು ಮತ್ತು ರಾವ್ ಮಕ್ಕಳು

ಅಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರ ಪುತ್ರರು ಕ್ರಮವಾಗಿ
ಚಂದ್ರಬಾಬು ನಾಯ್ಡು ಮತ್ತು ಚಂದ್ರಶೇಖರ್ ರಾವ್
ಚಂದ್ರಬಾಬು ನಾಯ್ಡು ಮತ್ತು ಚಂದ್ರಶೇಖರ್ ರಾವ್

ಹೈದರಾಬಾದ್: ಅಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರ ಪುತ್ರರು ಕ್ರಮವಾಗಿ ತಮ್ಮ ರಾಜ್ಯಗಳ ಬಗ್ಗೆ ಪ್ರಚಾರ ಮಾಡಲು ಅಮೆರಿಕಾಕ್ಕೆ ತೆರಳಿದ್ದಾರೆ.

ಎರಡು ದಿನಗಳ ಹಿಂದೆ ಅಮೆರಿಕಾಕ್ಕೆ ತೆರಳಿದ ನಾಯ್ಡು ಅವರ ಪುತ್ರ ಲೋಕೇಶ್ ಉದ್ಯಮಿಗಳ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ.

ಆಂಧ್ರ ಸರ್ಕಾರದ 'ಸ್ಮಾರ್ಟ್ ಹಳ್ಳಿ' ಯೋಜನೆಯ ಬಗ್ಗೆ ಮಾತನಾಡಿದ ಲೋಕೇಶ್ ಅಮೇರಿಕಾ ವಾಣಿಜ್ಯ ಇಲಾಖೆಯ ಅಧಿಕಾರಿ ಅರುಣ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಟಿಡಿಪಿ ಪಕ್ಷ ತಿಳಿಸಿದೆ.

ಈ ಮಧ್ಯೆ ರಾವ್ ಅವರ ಮಗ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಟಿ ರಾಮರಾವ್ ಕೂಡ ಅಮೆರಿಕಾಕ್ಕೆ ತೆರಳಿದ್ದಾರೆ.

ಅಮೇರಿಕಾದಲ್ಲಿ ಭಾರತೀಯ ರಾಯಭಾರಿಯನ್ನು ರಾವ್ ಭೇಟಿ ಮಾಡಲಿದ್ದು, ಅಮೇರಿಕಾ ಆಡಳಿತದ ಹಲವು ಅಧಿಕಾರಿಗಳು ಹಾಗೂ ದೊಡ್ಡ ಹೂಡಿಕೆದಾರರನ್ನು ಕೂಡ ಭೇಟಿ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com