

ಬೀಜಿಂಗ್: ಚೈನಾದ ಕ್ಸಿಂಜಿಯಾಂಗ್ ಸ್ವಾಯತ್ತತ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಪ್ರಾರಂಭಿಸಿದ ಭಯೋತ್ಪಾದನಾ ವಿರೋಧಿ ಅಭಿಯಾನದಲ್ಲಿ ಸುಮಾರು ೧೮೧ ಭಯೋತ್ಪಾದಕ ಗುಂಪುಗಳನ್ನು ಪೊಲೀಸರು ನಾಶ ಮಾಡಿದ್ದಾರೆ.
ಚೈನಾದ ಕಮ್ಮ್ಯುನಿಸ್ಟ್ ಪಕ್ಷದ ಪ್ರಾದೇಶಿಕ ಸಮಿತಿಯ ದಾಖಲೆಗಳು ಸೂಚಿಸುವಂತೆ ಯೋಜನಾ ಹಂತದಲ್ಲೇ ಸುಮಾರು ೯೨.೬% ಭಯೋತ್ಪಾದಕ ಸಂಘಟನೆಗಳನ್ನು ತೊಡೆದು ಹಾಕಲಾಗಿದೆ ಹಾಗು ಸುಮಾರು ೧೧೨ ಜನ ಶಂಕಿತರು ಪೊಲೀಸರಿಗೆ ಶರಣಾಗಿದ್ದಾರೆ.
೨೦೧೪ರ ಮೇನಲ್ಲಿ ಈ ಪ್ರದೇಶದ ರಾಜಧಾನಿ ಅರಮ್ಕಿಯ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ೩೯ ಜನ ಮೃತಪಟ್ಟ ಹಿನ್ನಲೆಯಲ್ಲಿ ಈ ಅಭಿಯಾನವನ್ನು ಚೈನಾ ಪ್ರಾರಂಭಿಸಿತ್ತು.