ಬಾಂಗ್ಲಾದೇಶಿಗಳು ಭಾರತ ವಿರೋಧಿಯಾಗಲು ಅವಾಮಿ ಲೀಗ್ ಕಾರಣ!
ಬಹುತೇಕ ಬಾಂಗ್ಲಾದೇಶಿಗಳು ಭಾರತ ವಿರೋಧಿಯಾಗಲು, ಬಾಂಗ್ಲಾದ ಆಡಳಿತ ಪಕ್ಷ ಅವಾಮಿ ಲೀಗ್ ನೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿರುವುದೇ ಕಾರಣ

ಢಾಕಾ: ಬಹುತೇಕ ಬಾಂಗ್ಲಾದೇಶಿಗಳು ಭಾರತ ವಿರೋಧಿಯಾಗಲು, ಬಾಂಗ್ಲಾದ ಆಡಳಿತ ಪಕ್ಷ ಅವಾಮಿ ಲೀಗ್ ನೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿರುವುದೇ ಕಾರಣ ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಮುಖ್ಯಸ್ಥ ಖಲೀದಾ ಜಿಯಾ ಹೇಳಿದ್ದಾರೆ.
ಢಾಕಾ ವಿವಿಯ ಮಾಜಿ ಉಪಕುಲಪತಿ ಪ್ರೊ.ಎಮಾಜುದ್ದೀನ್ ಅಹ್ಮದ್ ಸಹ ಇದೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಹೆಚ್ಚಿನ ಬಾಂಗ್ಲಾದೇಶೀಯರು ಭಾರತ ವಿರೋಧಿಯಾಗಿರುವುದಕ್ಕೆ ಭಾರತ ಸರ್ಕಾರ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿರುವ ಅವಾಮಿ ಲೀಗ್ ಪಕ್ಷದೊಂದಿಗೆ ಉತ್ತಮ ಸಂಬಂಧ ಹೊಂದಿರುವುದೇ ಕಾರಣ ಎಂದು ಹೇಳಿದ್ದರು.
ಸುಂದರ್ ಬನ್ ನಲ್ಲಿ ಭಾರತ-ಬಾಂಗ್ಲಾ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ರಾಮ್ ಪಾಲ್ ವಿದ್ಯುತ್ ಸ್ಥಾವರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಮಾತನಾಡಿರುವ ಎಮಾಜುದ್ದೀನ್ ಅಹ್ಮದ್ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಭಾರತದ ನೆರವನ್ನು ಸ್ಮರಿಸಿದ್ದು, ಬಾಂಗ್ಲಾದೇಶದಲ್ಲಿ ಈಗ ಭಾರತವನ್ನು ಏಕೆ ಸಹಿಸಲಾಗುತ್ತಿಲ್ಲ? ಬಾಂಗ್ಲಾದೇಶೀಯರು ಯಾಕೆ ಭಾರತ ವಿರೋಧಿಗಳಾಗಿದ್ದಾರೆ? ಈ ರೀತಿ ಆಗಬಾರದಿತ್ತು ಎಂದು ಹೇಳಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಸೊಗಸಾಗಿದೆ. ನಿಮ್ಮ ದೇಶ ಮಾತ್ರ ಅಂತಹ ಒಳ್ಳೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಆದರೆ ಅದು ಬಾಂಗ್ಲಾದೇಶದಲ್ಲೇಕೆ ಸಾಧ್ಯಗುತ್ತಿಲ್ಲ? ಈ ಬಗ್ಗೆ ಯಾಕೆ ಭಾರತ ಏನನ್ನೂ ಮಾತನಾಡುತ್ತಿಲ್ಲ ಎಂದು ಅಹ್ಮದ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಭಾರತದೆಡೆಗೆ ಶೇಖ್ ಹಸೀನಾ ಅವರ ಆಡಳಿತ ತೀರಾ ದುರ್ಬಲವಾಗಿದೆ ಎಂದು ಆರೋಪಿಸಿರುವ ಅಹ್ಮದ್, ಹವಾಮಾನ ಬದಲಾವಣೆ ಸಮಸ್ಯೆಗೆ ಪರಿಹಾರ ನೀಡಿದ್ದಕ್ಕಾಗಿ ಚಾಂಪಿಯನ್ಸ್ ಆಫ್ ಅರ್ತ್ ಪ್ರಶಸ್ತಿಗೆ ಭಾಜನರಾದ ಶೇಖ್ ಹಸೀನಾ ತಕ್ಷಣವೇ ರಾಮ್ ಪಾಲ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸುಂದರ್ ಬನ್ ನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣವಾಗುತ್ತಿರುವುದಕ್ಕೆ ಪರಿಸರವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


