ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾರಿಗೆ ಅಡ್ಡ ಬಂದ ಯುವಕ ಪೊಲೀಸ್ ವಶಕ್ಕೆ

ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವಾಗ ಕಾರಿಗೆ ಅಡ್ಡ ಬಂದು ನಿಂತು ಪರಾರಿಯಾಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ...
Updated on: 

ಮೈಸೂರು: ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವಾಗ ಕಾರಿಗೆ ಅಡ್ಡ ಬಂದು ನಿಂತು ಪರಾರಿಯಾಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಕಷ್ಟು ಭದ್ರತೆಯ ನಡುವೆಯೂ ಪ್ಲಾಸ್ಟಿಕ್ ಕವರ್ ಹಿಡಿದು ಕಾರಿಗೆ ಅಡ್ಡ ಬಂದು ನಿಂತಿದ್ದ. ಈ ಘಟನೆ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿತ್ತು. ಬಳಿಕ ಈ ಯುವಕನಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಭಾನುವಾರ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧಿತ ಯುವಕ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದು, ವರಕೋಡು ಗ್ರಾಮದ ವಿನಯ್ (19) ಎಂದು ಗುರುತಿಸಲಾಗಿದೆ.

ಮೋದಿ ಅವರನ್ನು ಭೇಟಿ ಮಾಡಿ 'ಗ್ರೀನ್ ಇಂಡಿಯಾ' ಯೋಜನೆಗೆ ಸಂಬಂಧಿಸಿ ತನ್ನ ಅಭಿಪ್ರಾಯ ಹಂಚಿಕೊಳ್ಳುವುದು ವಿನಯ್ ಕನಸಾಗಿತ್ತು. ವಿಚಾರಣೆ ವೇಳೆ ಸ್ವತಃ ವಿನಯ್ ಈ ಎಲ್ಲಾ ವಿಚಾರಗಳನ್ನು ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com