

ದಾವೋಸ್: ಪ್ರತಿಭಾ ಸ್ಪರ್ಧಾತ್ಮಕತೆಯ ಜಾಗತಿಕ ಪಟ್ಟಿಯಲ್ಲಿ ಭಾರತ 11 ಸ್ಥಾನ ಕುಸಿದು 89ಕ್ಕೆ ತಲುಪಿದೆ. ಭಾರತ ಸ್ಕಿಲ್ ಹೊಂದಿರುವ ಕಾರ್ಮಿಕರು ಮತ್ತು ಉದ್ಯಮ ಸ್ನೇಹಿ ಪರಿಸರ ಕೊರತೆಯಿಂದ ನಲುಗುತ್ತಿದೆ ಎಂಬುದನ್ನು ಇದು ತೋರಿಸಿದೆ.
ಕಳೆದ ವರ್ಷ ಭಾರತ ಈ ಪಟ್ಟಿಯಲ್ಲಿ 78ನೇ ಸ್ಥಾನದಲ್ಲಿತ್ತು. ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕ ಸೂಚ್ಯಂಕ (ಜಿಟಿಸಿ)ದ ಈ ಪಟ್ಟಿಯಲ್ಲಿ ಸ್ವಿಜರ್‍ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ, ಲಕ್ಸೆಂಬಗ್ರ್ , ಅಮೆರಿಕ, ಡೆನ್ಮಾರ್ಕ್ಗಳು ನಂತರದ ಸ್ಥಾನಗಳಲ್ಲಿವೆ. ಬ್ರಿಕ್ಸ್ ದೇಶಗಳಲ್ಲಿ ಭಾರತದ ರ್ಯಾಂಕಿಂಗ್ ಕನಿಷ್ಟವಾಗಿದ್ದರೆ 48ನೇ ರ್ಯಾಂಕ್‍ನೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದೆ. ಸ್ಕಿಲ್ ಹೊಂದಿರುವವರು ವಲಸೆ ಹೋಗುವುದರಲ್ಲಿ ಭಾರತ ಮತ್ತು ಚೀನಾ ಈಗಲೂ ಮುಂದಿನ ಸ್ಥಾನಗಳಲ್ಲಿವೆ. ಈ ದೇಶಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಹಣ ವ್ಯಯ ಮಾಡುತ್ತಿದ್ದು ಸ್ಕಿಲ್ ಅಭಿವೃದ್ಧಿ ಕ್ಷೇತ್ರವನ್ನು ನಿರ್ಲಕ್ಷಿಸಿವೆ ಎಂದು ವರದಿ ವಿವರಿಸಿದೆ.