

ಮಂಗಳೂರು/ತುಮಕೂರು: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಯೊಂದಿಗೆ ನಂಟು ಹಿನ್ನೆಲೆ ಇಬ್ಬರು ಶಂಕಿತ ಭಯೋತ್ಪಾದಕರನ್ನು ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.
ಕಾಲೇಜು ಹುಡುಗರನ್ನು ಟಾರ್ಗೆಟ್ ಮಾಡಿ ಇಸಿಸ್ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಬಜ್ಪೆ ಬಳಿಯ ಪೆರ್ಮುದೆಯಲ್ಲಿ 25 ವರ್ಷದ ನಜಮೂಲ್ ಹುಧಾ ಎಂಬಾತನನ್ನು ಎಟಿಎಸ್ ಅಧಿಕಾರಿಗಳು ತಡರಾತ್ರಿ 2 ಗಂಟೆ ಸುಮಾರಿಗೆ ಬಂಧಿಸಿದ್ದಾರೆ. ಇತ ಬೆಂಗಳೂರಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಮತ್ತೊಂದೆಡೆ ತುಮಕೂರಿನ ಗುಮ್ಜಿ ಸರ್ಕಲ್ ಬಳಿಯ ನಿವಾಸದಲ್ಲಿ 25 ವರ್ಷದ ಸೈಯದ್ ಹುಸೇನ್ ಶಂಕಿತ ಉಗ್ರನನ್ನು ಎಟಿಎಸ್ ಅಧಿಕಾರಿಗಳು ಕಳೆದ ರಾತ್ರಿ 4.30 ಸುಮಾರಿಗೆ ಬಂಧಿಸಿದ್ದಾರೆ. ಈ ಇಬ್ಬರು ಇಸಿಸ್ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.