ನೋಟು ಬದಲಾವಣೆ ಅವಧಿ ಡಿಸೆಂಬರ್ 30ರವರೆಗೂ ವಿಸ್ತರಣೆ: ಆರ್ ಬಿಐ

500 ಮತ್ತು 1000 ರು.ನೋಟುಗಳ ನಿಷೇಧದಿಂದಾಗಿ ಅವುಗಳನ್ನು ಬದಲಿಸಿಕೊಳ್ಳಲು ದೇಶದ ಜನತೆ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ಸಮಾಧಾನಕರ ಸುದ್ದಿ ನೀಡಿದ್ದು, ನೋಟು ಬದಲಾವಣೆ ಅವಧಿಯನ್ನು ಡಿಸೆಂಬರ್ 30ರವರೆವಿಗೂ ವಿಸ್ತರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: 500 ಮತ್ತು 1000 ರು.ನೋಟುಗಳ ನಿಷೇಧದಿಂದಾಗಿ ಅವುಗಳನ್ನು ಬದಲಿಸಿಕೊಳ್ಳಲು ದೇಶದ ಜನತೆ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ಸಮಾಧಾನಕರ ಸುದ್ದಿ ನೀಡಿದ್ದು,  ನೋಟು ಬದಲಾವಣೆ ಅವಧಿಯನ್ನು ಡಿಸೆಂಬರ್ 30ರವರೆವಿಗೂ ವಿಸ್ತರಿಸಿದೆ.

ನೋಟು ಬದಲಾವಣೆ ಸಮಸ್ಯೆ ಪರಿಷ್ಕಾರಕ್ಕೆ ಮುಂದಾಗಿರುವ ರಿಸರ್ವ್ ಬ್ಯಾಂಕ್ ನೋಟು ಬದಲಾವಣೆಯ ಅಂತಿಮ ದಿನಾಂಕವನ್ನು ನವೆಂಬರ್ 24ರ ಬದಲಿಗೆ ಡಿಸೆಂಬರ್ 30ಕ್ಕೆ ವಿಸ್ತರಿಸಿದೆ. ಆದರೆ ನೋಟು ಬದಲಾವಣೆ ಮಿತಿ  ಒಂದು ಬಾರಿಗೆ 2000 ರು. ಎಂಬ ನಿರ್ಧಾರವನ್ನು ಮುಂದುವರೆಸುವುದಾಗಿ ಆರ್ ಬಿಐ ತಿಳಿಸಿದೆ. ಓರ್ವ ವ್ಯಕ್ತಿ ಒಂದು ಬಾರಿಗೆ 2000 ರು.ಹಣವನ್ನು ಮಾತ್ರ ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಅದಕ್ಕಿಂತಲೂ ಹೆಚ್ಚಿನ ಹಣವನ್ನು  ಬದಲಾಯಿಸಿಕೊಳ್ಳುವಂತಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ಈ ಬಗ್ಗೆ ವಿತ್ತ ಇಲಾಖೆ ಹಾಗು ಬ್ಯಾಂಕುಗಳ ಚೇರ್ಮನ್, ಕಾರ್ಯನಿರ್ವಾಹಕ, ಕಾರ್ಯನಿರ್ವಾಹಕ ಅಧಿಕಾರಿ (ಸಾರ್ವಜನಿಕ ವಿಭಾಗ), ಖಾಸಗಿ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ನಗರ ಮತ್ತು ರಾಜ್ಯಗಳ ಸಹಕಾರಿ ಬ್ಯಾಂಕುಗಳಿಗೆ  ನಿರ್ದೇಶನ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com