ಇಂದು ತಮ್ಮ ಪೋಯಸ್ ಗಾರ್ಡನ್ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ, ತಮ್ಮ ಹೆಸರಿನಲ್ಲಿ ರಾಜ್ಯಪಾಲರಿಗೆ ವಿಳಾಸ ಮಾಡಿ ಬರೆದ ನಕಲಿ ಪತ್ರವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಮಹಿಳೆ ರಾಜಕೀಯದಲ್ಲಿರುವುದು ತುಂಬಾ ಕಷ್ಟ. ಜಯಲಲಿತಾ ಅವರ ಅವಧಿಯಲ್ಲಿ ನಾನು ಇದನ್ನು ನೋಡಿದ್ದೇನೆ. ಆದರೆ ಅವರು ಅದೆಲ್ಲವನ್ನೂ ಮೀರಿ ಬೆಳೆದಿದ್ದರು ಎಂದರು.