ವಾಟ್ಸ್ ಆಪ್, ಫೇಸ್ಬುಕ್ ನಿಯಂತ್ರಿಸುವ ಬಗ್ಗೆ ಕೇಂದ್ರದ ಸ್ಪಷ್ಟೀಕರಣ ಕೋರಿ ಸುಪ್ರೀಂ ನೋಟಿಸ್

ವಾಟ್ಸ್ ಆಪ್ ಮತ್ತು ಫೇಸ್ಬುಕ್ ಬಳಕೆದಾರರ ಸಂದೇಶಗಳ, ಮಾತುಕತೆಯ ಖಾಸಗಿತನವನ್ನು ಸಂರಕ್ಷಿಸಲು ಆ ಸೇವೆಗಳ ಮೇಲೆ ನಿಯಂತ್ರಣ ಜಾರಿ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿ ಸುಪ್ರೀಂ
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on: 
ನವದೆಹಲಿ: ವಾಟ್ಸ್ ಆಪ್ ಮತ್ತು ಫೇಸ್ಬುಕ್ ಬಳಕೆದಾರರ ಸಂದೇಶಗಳ, ಮಾತುಕತೆಯ ಖಾಸಗಿತನವನ್ನು ಸಂರಕ್ಷಿಸಲು ಆ ಸೇವೆಗಳ ಮೇಲೆ ನಿಯಂತ್ರಣ ಜಾರಿ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. 
ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿಗೂ ನೋಟಿ ನೀಡಿರುವ ನ್ಯಾಯಾಲಯ, ಅಂತರ್ಜಾಲ ಸಂದೇಶ ರವಾನೆ ಸೇವೆ ವಾಟ್ಸ್ ಆಪ್ ಮತ್ತು ಸಾಮಾಜಿಕ ಜಾಲತಾಣ ಫೇಸ್ಬುಕ್ ಗೆ ಕೂಡ ನೋಟಿಸ್ ನೀಡಿದೆ. 
"ಇದು ಖಾಸಗಿ ವ್ಯಕ್ತಿ, ಖಾಸಗಿ ಸೇವೆಯನ್ನು ಬಳಸಿದಂತೆ. ನೀವು ಒಪ್ಪಿಕೊಳ್ಳಬೇಕು ಅಥವಾ ಬಿಡಬೇಕು - ಅದು ನಿಮ್ಮ ಹಕ್ಕು" ಎಂದು ಮುಖ್ಯ ನ್ಯಾಯಾಧೀಶ ನ್ಯಾಯಾಧೀಶ ಜಗದೀಶ್ ಸಿಂಗ್ ಖೇಕರ್ ಮತ್ತು ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಅವರಿಗೆ ತಿಳಿಸಿದಾಗ, ಅರ್ಜಿದಾರ ವಾಟ್ಸ್ ಆಪ್ ಹೊಸ ನೀತಿಯ ಪ್ರಕಾರ ಈ ಸೇವೆ ಬಳಕೆದಾರರ ಖಾಸಗಿ ಮಾಹಿತಿಗಳನ್ನು ವ್ಯಾವಹಾರಿಕ ಸಂಗತಿಗಳಿಗೂ ಬಳಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. 
ಅರ್ಜಿದಾರರ ಪರ ವಾದಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, "ಸಂವಿಧಾನದ ೧೯ ಮತ್ತು ೨೧ ನೆಯ ವಿಧಿಯ ಪ್ರಕಾರ, ನನ್ನ ಖಾಸಗಿ ಮಾಹಿತಿಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ" ಎಂದು ಕೂಡ ಕೋರ್ಟ್ ಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com