• Tag results for Nitish Kumar

ಬಿಜೆಪಿ ಶಾಸಕನಿಗೆ ಅಕ್ರಮವಾಗಿ ಸಂಚಾರಿ ಪಾಸ್; ಬಿಹಾರದಲ್ಲಿ ಅಧಿಕಾರಿ ಅಮಾನತು!

ಶಾಸಕನ ಮಗಳನ್ನು ಕರೆತರಲು ಅಕ್ರಮವಾಗಿ ಸಂಚಾರಿ ಪಾಸ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.

published on : 22nd April 2020

ಕೊರೋನಾ ಸೋಂಕು ಪೀಡಿತರ ಸಂಪೂರ್ಣ ವೆಚ್ಚ ಸರ್ಕಾರದ್ದೇ, ಮೃತರ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ: ಬಿಹಾರ ಸಿಎಂ ನಿತೀಶ್ ಕುಮಾರ್

ಕೊರೋನಾ ವೈರಸ್‌ ಸೋಂಕಿತರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸೋಂಕಿನಿಂದ ಸಾವು ಸಂಭವಿಸಿದರೆ 4 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದಾರೆ. 

published on : 16th March 2020

ಬಿಹಾರ ಚುನಾವಣೆ: ಐದು ವರ್ಷಗಳ ಸಾಧನೆ ಬಿಚ್ಚಿಟ್ಟ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಲೇ ಸಿದ್ಧತೆ ಆರಂಭಿಸಿದ್ದು, ಭಾನುವಾರ ತಮ್ಮ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ಐದು ವರ್ಷಗಳ ಸಾಧನೆಯನ್ನು ಬಿಚ್ಚಿಟ್ಟಿದ್ದಾರೆ.

published on : 1st March 2020

ಎನ್‌ಆರ್‌ಸಿ ವಿರುದ್ಧ ನಿರ್ಣಯ ಅಂಗೀಕರಿಸಿದ ಮೊದಲ ಎನ್‌ಡಿಎ ಆಡಳಿತದ ರಾಜ್ಯ ಬಿಹಾರ!

ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ವಿರುದ್ಧ ಬಿಹಾರ ವಿಧಾನಸಭೆ ಮಂಗಳವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು..  

published on : 25th February 2020

ನಿತೀಶ್ ಆಡಳಿತ: ಪ್ರಶಾಂತ್ ಕಿಶೋರ್ ತೀವ್ರ ವಾಗ್ದಾಳಿ

ಬಿಜೆಪಿ- ಜೆಡಿಯು ಮೈತ್ರಿಯ ವಿಷಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ತಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು ಎಂದು ಜೆಡಿಯುವಿನಿಂದ ಉಚ್ಛಾಟನೆಯಾಗಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

published on : 18th February 2020

ಬಿಜೆಪಿ ನಾಯಕತ್ವಕ್ಕೆ ನಿತೀಶ್ ಅಧೀನ: ಬಿಹಾರದ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸಿದ ಪ್ರಶಾಂತ್ ಕಿಶೋರ್ 

ಜೆಡಿಯುನಿಂದ ಉಚ್ಛಾಟನೆ ಮಾಡಿದ ನಂತರ ಮೌನ ಮುರಿದಿರುವ ಚುನಾವಣಾ ಕಾರ್ಯತಂತ್ರಜ್ಞ ಹಾಗೂ ರಾಜಕಾರಣಿ ಪ್ರಶಾಂತ್  ಕಿಶೋರ್,  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ನಾಯಕತ್ವಕ್ಕೆ ತಲೆಬಾಗುತ್ತಾರೆ ಎಂದಿದ್ದಾರೆ. ನಿತೀಶ್ ಕುಮಾರ್ ಅವರನ್ನು ಈ ಹಿಂದೆ ಇಷ್ಟಪಡುತ್ತಿದ್ದಂತೆ  ರೈತರು ಈಗ ಇಷ್ಟಪಡುತ್ತಿಲ್ಲ ಎಂದು ಹೇಳಿದ್ದಾರೆ. 

published on : 18th February 2020

ದೆಹಲಿಯಲ್ಲಿ ಕೆಲವರಿಗೆ ಪ್ರಚಾರದಲ್ಲಿ ಹೆಚ್ಚಿನ ಆಸಕ್ತಿ- ಕೇಜ್ರಿವಾಲ್ ವಿರುದ್ಧ ನಿತೀಶ್ ವಾಗ್ದಾಳಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲವರು ಪ್ರಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಕಳೆದ ಐದು ವರ್ಷಗಳಲ್ಲಿ ನಗರದ ಅಭಿವೃದ್ಧಿಗಾಗಿ  ಮಾಡಿರುವ ಕೆಲಸವಾದರೂ ಏನು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

published on : 2nd February 2020

ಪಕ್ಷದಿಂದ ಉಚ್ಚಾಟಿಸಿದ ಬಳಿಕ ನಿತಿಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೆಡಿಯುನಿಂದ ಉಚ್ಚಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಶಾಂತ್ ಕಿಶೋರ್ ಅವರು....

published on : 29th January 2020

ನಿತೀಶ್ ಕುಮಾರ್ ಸುಳ್ಳುಗಾರ: ಜೆಡಿಯು ನಾಯಕನ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

ಜೆಡಿಯು ಉಪಾಧ್ಯಕ್ಷ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು ಸುಳ್ಳುಗಾರನೆಂದು ಆರೋಪಿಸಿದ್ದಾರೆ. 

published on : 29th January 2020

ತಾರಕಕ್ಕೇರಿದ ಸುಶೀಲ್ ಮೋದಿ ನಡುವಿನ ವಾಕ್ಸಮರ; ವಿಡಿಯೋ ಷೇರ್ ಮಾಡಿ ಕಾಲೆಳೆದ ಪ್ರಶಾಂತ್ ಕಿಶೋರ್

ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಜೆಡಿಯು ಮುಖಂಡ ಪ್ರಶಾಂತ್ ಕಿಶೋರ್ ಅವರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಸುಶೀಲ್ ಮೋದಿಗೆ ತಿರುಗೇಟು ನೀಡಿರುವ ಪ್ರಶಾಂತ್ ಕಿಶೋರ್ ಅವರ ಹಳೆಯ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ ಕಿಡಿಕಾರಿದ್ದಾರೆ.

published on : 25th January 2020

'ನಿಮಗೆ ಬೇಕಾದಲ್ಲಿಗೆ ಹೋಗಬಹುದು': ಪವನ್ ವರ್ಮಾಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಮಾತಿನ ಏಟು 

ದೆಹಲಿ ವಿಧಾನಸಭೆ ಚುನಾವಣೆಗೆ ಸಂಯುಕ್ತ ಜನತಾದಳ(ಜೆಡಿ(ಯು)) ಬಿಜೆಪಿ ಜೊತೆ ಕೈಜೋಡಿಸಿರುವುದನ್ನು ಬಹಿರಂಗವಾಗಿ ಪ್ರಶ್ನೆ ಮಾಡಿರುವ ಪಕ್ಷದ ನಾಯಕ ಪವನ್ ಮರ್ಮಾ ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಪವನ್ ವರ್ಮಾ ಅವರು ಜೆಡಿ(ಯು) ಬಿಟ್ಟು ಯಾವ ಪಕ್ಷಕ್ಕೆ ಹೋಗಲು ಕೂಡ ಮುಕ್ತವಾಗಿದ್ದಾರೆ ಎಂದಿದ್ದಾರೆ.

published on : 23rd January 2020

ಮೋದಿಗೆ ಟಾಂಗ್ ಕೊಟ್ಟ ನಿತೀಶ್ ನಾಯಕತ್ವದಲ್ಲೇ ಬಿಹಾರ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದ್ದೇಕೆ? ಶಾ ರಣತಂತ್ರ

ಎನ್‌ಡಿಎ ಮೈತ್ರಿಕೂಟ ಪಕ್ಷಗಳು ಒಗ್ಗಟ್ಟಿನಿಂದ ಮುಂದುವರಿಯಲಿದ್ದು, ಬಿಹಾರದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸ್ಪಷ್ಟಪಡಿಸಿದ್ದಾರೆ.

published on : 16th January 2020

ಬಿಹಾರದಲ್ಲಿ ಎನ್ ಆರ್ ಸಿ ಜಾರಿಯಾಗಲ್ಲ- ಮುಖ್ಯಮಂತ್ರಿ ನಿತೀಶ್ ಕುಮಾರ್ 

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಬಿಹಾರದಲ್ಲಿ ಜಾರಿಯಾಗಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

published on : 20th December 2019

ಅತ್ಯಾಚಾರಕ್ಕೆ ಅಶ್ಲೀಲ ವೆಬ್ ಸೈಟ್ ಕಾರಣ, ಪೋರ್ನ್ ನಿಷೇಧಿಸುವಂತೆ ಕೇಂದ್ರಕ್ಕೆ ಪತ್ರ: ಬಿಹಾರ ಸಿಎಂ

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಅಶ್ಲೀಲ ವೆಬ್ ಸೈಟ್ ಗಳು ಕಾರಣ ಎಂದು ಆರೋಪಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎಲ್ಲಾ ಪೋರ್ನ್ ವೆಬ್ ಸೈಟ್ ಗಳನ್ನು ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

published on : 6th December 2019

ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಿ: ಪ್ರಧಾನಿ ಮೋದಿಗೆ ನಿತೀಶ್ ಕುಮಾರ್ ಆಗ್ರಹ

ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎನ್ಡಿಎ ಮೈತ್ರಿ ಪಕ್ಷ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ. 

published on : 23rd October 2019
1 2 3 >