• Tag results for Sadananda gowda

ಮುಂಗಾರಿಗೆ ರಸಗೊಬ್ಬರ ಕೊರತೆಯಾಗದು- ಸದಾನಂದ ಗೌಡ

ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತ ಸಮೂಹಕ್ಕೆ ರಸಗೊಬ್ಬರದ ಕೊರತೆ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

published on : 25th May 2020

ಔಷಧಗಳಿಗೆ ಅಗತ್ಯವಿರುವ ರಾಸಾಯನಿಕ ಮುಂದಿನ ದಿನಗಳಲ್ಲಿ ಭಾರತದಲ್ಲೇ ತಯಾರಿ: ಸದಾನಂದ ಗೌಡ

ಭಾರತ ಸ್ವಾವಲಂಬಿ ರಾಷ್ಟ್ರವಾಗುವತ್ತ ದಾಪುಗಾಲಿರಿಸಿದ್ದು ಔಷಧಗಳ ತಯಾರಿಕೆಗೆ ಅಗತ್ಯವಿರುವ ರಾಸಾಯನಿಕಗಳಿಗೆ ಚೀನಾ ದೇಶದ ಮೇಲೆ ಅವಲಂಬಿತವಾಗುವ ಬದಲು ದೇಶೀಯವಾಗಿ ಉತ್ಪಾದಿಸುವ ಕುರಿತಂತೆ ಯೋಜನೆ ರೂಪಿಸಲಾಗುತ್ತಿದೆ

published on : 16th May 2020

ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ: ಡಿ.ವಿ. ಸದಾನಂದ ಗೌಡ

ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

published on : 9th May 2020

ಮಲೇಷಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು: ನೆರವಿಗೆ ಧಾವಿಸಿದ ಕೇಂದ್ರ ಸಚಿವ ಸದಾನಂದಗೌಡ

ತವರಿಗೆ ಮರಳಲು ಸಾಧ್ಯವಾಗದೆ ವಿದೇಶಗಳಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ನೆರವಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮುಂದಾಗಿದ್ದಾರೆ.

published on : 9th May 2020

ದೆಹಲಿಯಿಂದ ರಾಜ್ಯಕ್ಕೆ ವಿಶೇಷ ರೈಲು,ದುಬೈನಿಂದ ಬೆಂಗಳೂರಿಗೆ ವಿಶೇಷ ವಿಮಾನ-ಸದಾನಂದಗೌಡ

ಲಾಕ್ ಡೌನ್ ನಿಂದಾಗಿ ಉತ್ತರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ತಮ್ಮ ರಾಜ್ಯಕ್ಕೆ ಮರಳಲು ವಿಶೇಷ ರೈಲು ಸಂಚಾರ ಮಾಡಲು ರೈಲ್ವೆ ಇಲಾಖೆ ಸಮ್ಮತಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. 

published on : 7th May 2020

ರಸಗೊಬ್ಬರ, ಔಷಧೋದ್ಯಮಗಳಿಂದ 136 ಕೋಟಿ ರೂ. ದೇಣಿಗೆ: ಡಿವಿ ಸದಾನಂದ ಗೌಡ

ಮಾರಕ ಕೊರೋನಾ ಸೋಂಕಿನ ಪರಿಹಾರ ಕಾರ್ಯಕ್ಕಾಗಿ ಪ್ರಧಾನಮಂತ್ರಿ ಪ್ರಧಾನಿ ತುರ್ತು ಪರಿಹಾರ ನಿಧಿಗೆ ಔಷಧೋದ್ಯಮಗಳು, ರಾಸಾಯನಿಕ ಹಾಗೂ ರಸಗೊಬ್ಬರ ಕಂಪನಿಗಳು ಉದಾರವಾಗಿ ದೇಣಿಗೆ ನೀಡಿದ್ದು, ಈವರೆಗೆ 136.52 ಕೋಟಿ ರೂಪಾಯಿ ನೆರವು ಸಂಗ್ರಹವಾಗಿದೆ.

published on : 4th April 2020

ಕೋವಿಡ್ -19; ಪರಿಹಾರ ನಿಧಿಗೆ 1 ಕೋಟಿ ದೇಣಿಗೆ ನೀಡಿದ ಸದಾನಂದಗೌಡ

ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಸದಾನಂದ ಗೌಡ ಅವರು ತಮ್ಮ ಸಂಸದರ ನಿಧಿಯಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ವೇತನ ಮತ್ತು ಒಂದು ಕೋಟಿ ರೂ. ದೇಣಿಗೆ  ನೀಡಿದ್ದಾರೆ.

published on : 30th March 2020

ಕೊರೋನಾ ಗೆ ಮದ್ದಿಲ್ಲ: ನಿಯಂತ್ರಣವೇ ಮದ್ದು - ಕೇಂದ್ರ ಸಚಿವ ಸದಾನಂದಗೌಡ

ಜಾಗತಿಕವಾಗಿ ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಗೆ ಈವರೆಗೆ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಹೀಗಾಗಿ ರೋಗ ಬರದಂತೆ ನೋಡಿಕೊಳ್ಳುವುದೇ ಪರಿಹಾರ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

published on : 22nd March 2020

ನೆರೆ ಸಂಕಷ್ಟ: ಕೇಂದ್ರದಿಂದ ಮತ್ತಷ್ಟು ಪರಿಹಾರ ಪಡೆಯುವ ವಿಶ್ವಾಸದಲ್ಲಿ ರಾಜ್ಯ

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ನೆರೆ ಸಂಕಷ್ಟ ಎದುರಿಸಲು ಕೇಂದ್ರ ಸರ್ಕಾರದಿಂದ ಮತ್ತಷ್ಟು ಪರಿಹಾರ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ. 

published on : 10th March 2020

ನೋಟುಗಳ ಅಮಾನ್ಯದಿಂದ ಭ್ರಷ್ಟಾಚಾರ ಇಳಿಮುಖ: ಡಿ.ವಿ.ಸದಾನಂದ ಗೌಡ

ನೋಟು ಅಮಾನ್ಯದ ಬಳಿಕ ದೇಶದಲ್ಲಿ ಭ್ರಷ್ಟಾಚಾರ ತಗ್ಗಿದ್ದು ಅರ್ಥವ್ಯವಸ್ಥೆಗೆ ಹೊಸ ಆಯಾಮ ದೊರೆತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ ಸದಾನಂದ ಗೌಡ ಹೇಳಿದ್ದಾರೆ.

published on : 23rd February 2020

ಅಮೂಲ್ಯ ಹಿಂದೆ ಕಾಣದ ಕೈ ಗಳ ಕೆಲಸ: ಸದಾನಂದ ಗೌಡ 

ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅತ್ಯಂತ ಖಂಡನೀಯ. ಅಮೂಲ್ಯ ವಿರುದ್ಧ ಅತ್ಯಂತ ಕಠೋರವಾದ ಕ್ರಮವನ್ನು ಜರುಗಿಸಬೇಕು. ಈ ಹುಡುಗಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅವುಗಳನ್ನು ಪತ್ತೆ ಹಚ್ಚಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

published on : 21st February 2020

2019ರ ಬೀಜ ಮಸೂದೆ ರೈತರಿಗೆ ಮಾರಕ; ಅದು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು: ಸದಾನಂದ ಗೌಡರಿಗೆ ಪತ್ರ ಬರೆದ ಸಿದ್ದರಾಮಯ್ಯ

2019ರ ಬೀಜ ಮಸೂದೆ ರೈತರಿಗೆ ಮಾರಕ; ಅದು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

published on : 11th February 2020

ಮಂಗಳೂರು ಗಲಭೆ: ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ವ್ಯಂಗ್ಯ! 

ಮಂಗಳೂರು ಗಲಭೆ ವಿಷಯವಾಗಿ ಮಾಜಿ ಸಿಎಂ  ಎಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. 

published on : 10th January 2020

ನಿರೀಕ್ಷೆಯಂತೆಯೇ ಬಿಜೆಪಿ ಪರ ಫಲಿತಾಂಶ ಬಂದಿದೆ: ಡಿ.ವಿ.ಸದಾನಂದ ಗೌಡ

15 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿತ್ತು.  ನಮ್ಮ ನಿರೀಕ್ಷೆಯಂತೆಯೇ ಇದೀಗ ಫಲಿತಾಂಶ ಬಂದಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಸೋಮವಾರ ಹೇಳಿದ್ದಾರೆ. 

published on : 9th December 2019

ಹೌದು ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್: ಹೆಚ್ ಡಿ ಕುಮಾರಸ್ವಾಮಿ ತಿರುಗೇಟು 

ಕುಮಾರಸ್ವಾಮಿ ಕುಟುಂಬ ಚುನಾವಣೆ ಸಮಯ ಬಂದಾಗ ಅಳುವುದು ಸಾಮಾನ್ಯ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

published on : 28th November 2019
1 2 3 4 >