Andhra, Karnataka

ಜೂಜು ಅಡ್ಡೆ ಮೇಲೆ ದಾಳಿ: ತಮಿಳುನಾಡು ಪೊಲೀಸರ ಮೇಲೆ ಕರ್ನಾಟಕ ಜನರ ಗುಂಪಿನಿಂದ ಸತತ ಮೂರು ಗಂಟೆಗಳ ಕಾಲ ಹಲ್ಲೆ!
ಕಾರ್ತಿಕ ದೀಪಂ ಹಬ್ಬದ ಅಂಗವಾಗಿ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮೈಸೂರಿನಿಂದ ಸುಮಾರು 500ಕ್ಕೂ ಹೆಚ್ಚು ಜನರು ದೇವಾಲಯದಲ್ಲಿ ಸೇರಿದ್ದರು.

ಅಪಘಾತ ತಡೆಗೆ ರಾಜ್ಯ ಸರ್ಕಾರ ಹೆಜ್ಜೆ: ರಸ್ತೆಗಳಲ್ಲಿ AI ಸ್ಮಾರ್ಟ್ ಕ್ಯಾಮೆರಾಗಳ ಕಣ್ಗಾವಲು!
ರಾಜ್ಯದ ಆಯ್ದ 87 ಅಪಘಾತ ವಲಯಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ಸಿಎಂ ಆದೇಶಕ್ಕೂ ಕ್ಯಾರೇ ಎನ್ನದ KMF: 20 ದಿನ ಕಳೆದರೂ ನಂದಿನಿ ಮೊಸರಿನ ದರ ಇಳಿಕೆಗೆ ಮೀನಾಮೇಷ!
ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೊಸರಿನ ಬೆಲೆಯನ್ನು ಕನಿಷ್ಠ ₹2 ಕಡಿತಗೊಳಿಸುವಂತೆ ಮುಖ್ಯಮಂತ್ರಿ ಶಿವಕುಮಾರ್ ಸೂಚಿಸಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಮದ್ಯದ ಲೈಸೆನ್ಸ್ ವರ್ಗಾವಣೆ ಗೊಂದಲಕ್ಕೆ ಬ್ರೇಕ್ ಹಾಕಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರಿನ ಅಬಕಾರಿ ಉಪ ಆಯುಕ್ತರು 2026ರ ಸೆಪ್ಟೆಂಬರ್ 3ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ತಾಪಮಾನ ಕುಸಿತ: ಕರ್ನಾಟಕದ ರೈತರ ಮೊಗದಲ್ಲಿ ಮಂದಹಾಸ; ಹಿಂಗಾರು ಬೆಳೆಗಳಿಗೆ ಬಂತು ಜೀವಕಳೆ!
ಹಿಂಗಾರು ಹಂಗಾಮಿನ ಬಿತ್ತನೆ ಅಕ್ಟೋಬರ್‌ನಲ್ಲಿಯೇ ಆರಂಭವಾಗಿರುತ್ತದೆ. ಈಗ ತಾಪಮಾನ ಇಳಿಕೆಯಾಗುತ್ತಿರುವುದರಿಂದ ಮೇಲ್ಮಣ್ಣಿನಲ್ಲಿ ತೇವಾಂಶ ಮತ್ತು ಇಬ್ಬನಿ ಉಳಿಯಲು ಸಹಕಾರಿಯಾಗುತ್ತದೆ.

'ಬಸವ ಮಂಟಪ' ಕೃತಿ ವಿವಾದ: ರಾಜ್ಯಾದ್ಯಂತ ಭುಗಿಲೆದ್ದ ಪ್ರತಿಭಟನೆ; ಪುಸ್ತಕಕ್ಕೆ ನಿಷೇಧ..!
‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಅವರ ಘನತೆಗೆ ಕುಂದುಂಟುಮಾಡುವ ವಿಚಾರಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿ ಬಸವಪರ ಸಂಘಟನೆಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಪ್ರತಿಭಟನೆ ನಡೆಸಿವೆ.

ಬಾಲ್ಯವಿವಾಹ: ಯಾದಗಿರಿಯಲ್ಲಿ 7 ತಿಂಗಳಲ್ಲಿ 18 ಪ್ರಕರಣ ದಾಖಲು..!
ಬಾಲ್ಯವಿವಾಹ ತಡೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರೂ, ಹಲವು ಪ್ರಕರಣಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಮದುವೆಗಳು ನೆರವೇರಿರುವುದು ಆತಂಕಕ್ಕೆ ಕಾರಣವಾಗಿದೆ.

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿದೆ.

'ಬಾಯಿ ಮುಚ್ಚಿಕೊಂಡು ಕೇಳಯ್ಯ, ಕೇಳೋ ಯೋಗ್ಯತೆ ಇದ್ಯಾ ನಿನಗೆ?': ಶೂ, ಸಾಕ್ಸ್ ವಿತರಣೆ ವಿಳಂಬ ಪ್ರಶ್ನಿಸಿದವರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ದರ್ಪ? Video ವೈರಲ್..!
ಮನವಿ ಸಲ್ಲಿಸುವ ವಿಚಾರವಾಗಿ ಸಚಿವರು ಹಾಗೂ ದೇವರಾಜ ಕಿನ್ನಾಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮಧು ಬಂಗಾರಪ್ಪ ಅವರು ಆಕ್ರೋಶದಿಂದ ಮಾತನಾಡಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.

