Budget

ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭ: ಕೃಷಿ ಯಾಂತ್ರೀಕರಣ, ಹನಿ ನೀರಾವರಿಗೆ ಹೆಚ್ಚು ಒತ್ತು
ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಬಜೆಟ್ ನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಹನಿ ನೀರಾವರಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಂಸತ್ತಿನಲ್ಲಿ ಮುಂದುವರೆದ ದೆಹಲಿ ಗದ್ದಲ: ಲೋಕಸಭೆ, ರಾಜ್ಯಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ
ಸಂಸತ್ತಿನಲ್ಲಿ ನಡೆಯುತ್ತಿರುವ ಬಜಟ್ ಅಧಿವೇಶನದ ವೇಳೆ ದೆಹಲಿ ಹಿಂಸಾಚಾರ ಕುರಿತು ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಲೋಕಸಬೆ ಹಾಗೂ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿದೆ.

ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ ಸಿಎಂ ತವರೂರು ಬೂಕನಕೆರೆ ಗ್ರಾಮ
ಮುಖ್ಯಮಂತ್ರಿ ಅವರ ತವರೂರು ಬೂಕನಕೆರೆ ಗ್ರಾಮಸ್ಥರು ಈ ಬಾರಿ ಬಜೆಟ್ ನಲ್ಲಿ ಬಿ.ಎಸ್ ಯಡಿಯೂರಪ್ಪ ತಮ್ಮ ಗ್ರಾಮಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಎಂಬ ಭರವಸೆಯಲ್ಲಿದ್ದಾರೆ.

ಬಾಗಲಕೋಟೆ: ಬೆಟ್ಟದಷ್ಟು ಬೇಡಿಕೆಗಳಲ್ಲಿ ಮುಷ್ಠಿಯಷ್ಟಕ್ಕಾದರೂ ಸಿಗಬೇಕಿದೆ ಸ್ಪಂದನೆ!
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹಳೆ ಬೇಡಿಕೆಗಳ ಜತೆಗೆ ಹೊಸ ಅಂಶಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಗಳ ಮಹಾಪುರವನ್ನೇ ಹರಿಸಿದ್ದಾರೆ.

ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆ: ಶಿಕ್ಷಣ ಕ್ಷೇತ್ರಕ್ಕೆ ಏನೇನು ಯೋಜನೆಗಳಿವೆ, 'ಉಚಿತ ಸೈಕಲ್'ರದ್ದು?
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸುವುದು 2010ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಿ ಎಸ್ ಯಡಿಯೂರಪ್ಪನವರ ಮಹಾತ್ವಾಕಾಂಕ್ಷಿ ಯೋಜನೆಯಾಗಿತ್ತು. ಆದರೆ ಮುಂದಿನ ತಿಂಗಳು 5ರಂದು ಮಂಡನೆಯಾಗುತ್ತಿರುವ ಬಜೆಟ್ ನಲ್ಲಿ ಅದು ಇಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಸರ್ಕಾರದ ಖಜಾನೆಯಲ್ಲಿ ಹಣಕಾಸು ಕೊರತೆ ಸಮಸ್ಯೆ ಉಂಟಾಗಿದೆ.

ಕೃಷಿಕರು-ನೀರಾವರಿಗೆ ನಮ್ಮ ಮೊದಲ ಆದ್ಯತೆ: ಬಜೆಟ್ ಬಗ್ಗೆ ಸಿಎಂ ಹೇಳಿಕೆ
ಮಾರ್ಚ್ 5 ಕ್ಕೆ ಬಜೆಟ್ ಮಂಡನೆ ಮಾಡುವುದು ನಿಶ್ಚಿತವಾಗಿದ್ದು, ಅದಕ್ಕೆ ಪೂರ್ವಭಾವಿ ಸಿದ್ಧತೆಗಳೆಲ್ಲಾ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಚುನಾವಣೆಯತ್ತ ದೀದಿ ಚಿತ್ತ: ಉಚಿತ ವಿದ್ಯುತ್, ಕಾರ್ಮಿಕರಿಗೆ ಮನೆ ಸೇರಿ ಹಲವು ಜನಪ್ರಿಯ ಯೋಜನೆ ಘೋಷಿಸಿದ ಮಮತಾ
2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಜನತೆಗೆ ಷರತ್ತುಬದ್ಧ ಉಚಿತ ವಿದ್ಯುತ್ ಸೇರಿದಂತ ಹಲವು ಜನಪ್ರಿಯ ಯೋಜನೆಗಳನ್ನು ಸೋಮವಾರ ಘೋಷಿಸಿದ್ದಾರೆ.

ಮಕ್ಕಳ ಬಜೆಟ್ ಮಂಡಿಸುವ ಹೊಸ ಸಂಪ್ರದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಾಂದಿ
ಮಾರ್ಚ್ 5 ರಂದು ಆಯವ್ಯಯ ಮಂಡನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ತಯಾರಿ ನಡೆಸಿದ್ದಾರೆ.ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಹೊಸತನ ಮೆರೆದಿದ್ದ ಯಡಿಯೂರಪ್ಪ ಮತ್ತೊಂದು ವಿಶೇಷ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

ಮಾರ್ಚ್ 5ಕ್ಕೆ ಸಿಎಂ ಯಡಿಯೂರಪ್ಪರಿಂದ ರಾಜ್ಯ ಬಜೆಟ್ ಮಂಡನೆ
ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

