Business

ಗ್ರಾಹಕರೇ ಎಚ್ಚರ...32 ಲಕ್ಷಕ್ಕೂ ಅಧಿಕ ಕಾರ್ಡ್ ಗಳ ಪಿನ್ ನಂಬರ್ ಕಳವು!
ಸುಮಾರು 32 ಲಕ್ಷಕ್ಕೂ ಅಧಿಕ ಭಾರತೀಯ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿ ಕದಿಯಲಾಗಿದೆ ಎಂದು ತಿಳಿದುಬಂದಿದೆ.

ಎಸ್ ಬಿಐ ನ ಆರು ಲಕ್ಷ ಡೆಬಿಟ್ ಕಾರ್ಡ್ ಬ್ಲಾಕ್!
ಭದ್ರತಾ ಲೋಪದ ಹಿನ್ನಲೆಯಲ್ಲಿ ಖ್ಯಾತ ರಾಷ್ಟ್ರೀಯ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸುಮಾರು 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಗನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ; 200 ಅಂಕ ಏರಿಕೆ ಕಂಡ ಸೆನ್ಸೆಕ್ಸ್
ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಂಡಿದ್ದು, ನಿಫ್ಟಿ ಕೂಡ 54 ಅಂಕಗಳ ಏರಿಕೆ ಕಂಡಿದೆ.

ಅಮೆರಿಕದಲ್ಲಿ ದರ ಹೆಚ್ಚಳ ಭೀತಿ; ಭಾರತೀಯ ಷೇರು ಮಾರುಕಟ್ಟೆ ಕುಸಿತ
ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತ ಕಂಡಿದೆ.

ಪೆಟ್ರೋಲ್ ದರದಲ್ಲಿ 0.14 ರು, ಡೀಸೆಲ್ ದರ 0.10 ರು ಏರಿಕೆ
ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 0.14 ರು. ಹಾಗೂ ಡೀಸೆಲ್ ದರದಲ್ಲಿ 0.10 ರು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್, ಕೇವಲ 249 ರು. ಅನಿಯಮಿತ ಡಾಟಾ!
ಅಗ್ಗದ ಡಾಟಾ ಪ್ಲಾನ್ ಘೋಷಿಸಿದ್ದ ರಿಲಯನ್ಸ್ ಜಿಯೋಗೆ ಸಮನಾದ ಪೈಪೋಟಿ ನೀಡುತ್ತೇವೆ ಎಂದು ಘೋಷಿಸಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಅದಕ್ಕೆ ತಕ್ಕಂತೆ ಅತ್ಯಂತ ಅಗ್ಗದ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿದೆ.

ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕ; 16 ಸ್ಥಾನ ಜಿಗಿದ ಭಾರತ
ವಿಶ್ವ ಆರ್ಥಿಕತೆಯಲ್ಲಿ ಭಾರತ ಗಮನಾರ್ಹ ಸಾಧನೆ ತೋರುತ್ತಿದ್ದು, ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದಲ್ಲಿ ಬರೊಬ್ಬರಿ 16 ಸ್ಥಾನ ಮೇಲಕ್ಕೇರುವ ಮೂಲಕ ಭಾರತ 39ನೇ ಸ್ಥಾನಕ್ಕೇರಿದೆ.

ಸ್ವದೇಶವಾಯ್ತು, ಈಗ ಮಲ್ಯ ವಿದೇಶಿ ಆಸ್ತಿ ಮುಟ್ಟುಗೋಲಿಗೂ ಇಡಿ ಚಿಂತನೆ
ಭಾರತೀಯ ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ವಿದೇಶದಲ್ಲಿ ಕುಳಿತಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿದೇಶಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇ-ಕೆವೈಸಿ ಮೂಲಕ ಕೇವಲ 15 ನಿಮಿಷದಲ್ಲಿ ರಿಲಯನ್ಸ್ ಜಿಯೋ ಸಿಮ್ ಆಕ್ಟಿವೇಷನ್!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತೀರಾ ಅಗ್ಗದ ಆಫರ್ ಗಳ ಮೂಲಕ ಗ್ರಾಹಕರ ಸೆಳೆಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಸಿಮ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ಸುಲಭವಾಗಿ ಚಾಲ್ತಿಗೊಳಿಸಬಹುದು ಎಂದು ಸಂಸ್ಥೆ ಹೇಳಿದೆ.

