coronavirus

ದೇಶದಲ್ಲಿ ಕೊರೋನಾ ಪ್ರಭಾವ ಹೆಚ್ಚುತ್ತಲೇ ಇದ್ದು, ಲಾಕ್'ಡೌನ್ ಮಾರ್ಗಸೂಚಿಗಳನ್ನು ದುರ್ಬಲಗೊಳಿಸದಿರಿ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ
ದೇಶದಲ್ಲಿ ಕೊರೋನಾ ವೈರಸ್ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಲಾಕ್'ಡೌನ್ ಮಾರ್ಗಸೂಚಿಗಳನ್ನು ದುರ್ಬಲಗೊಳಿಸದಿರಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೋಮವಾರ ಸೂಚನೆ ನೀಡಿದೆ.

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಕೊರೋನಾ ಪ್ರಭಾವ: ಲಾಕ್'ಡೌನ್ ವಿಸ್ತರಣೆ ಕುರಿತು ಇಂದು ಸಚಿವ ಸಂಪುಟ ನಿರ್ಧಾರ
ರಾಜ್ಯದ ಆರ್ಥಿಕ ಪುನಶ್ಚೇತನಕ್ಕಾಗಿ ಲಾಕ್'ಡೌನ್ ಸಡಿಲಗೊಳಿಸುವುದು ಸೇರಿದಂತೆ ಇತೆರ ವಿಚಾರಗಳ ಕುರಿತು ಚರ್ಚಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಚಿವ ಸಂಪುಟ ಸಭೆ ಕರೆದಿದ್ದು, ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಕೊರೋನಾ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ: ಸಿಎಂ ಭೇಟಿಯಾದ ರಾಜ್ಯ ಕಾಂಗ್ರೆಸ್ ನಿಯೋಗ
ಕೊರೋನಾ ಸಂಕಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂಬ ಆಗ್ರವೂ ಸೇರಿದಂತೆ ಕಾಂಗ್ರೆಸ್ ಟಾಸ್ಕ್ ಫೋರ್ಸ್'ನಿಂದ ಸುಮಾರು 15 ಅಂಶಗಳ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಟ್ರಂಪ್ ನಿದ್ದೆಗೆಡಿಸಿದ ಕೊರೋನಾ: 40 ಸಾವಿರ ದಾಟಿದ ಸಾವಿನ ಸಂಖ್ಯೆ, 7.60 ಲಕ್ಷ ಮಂದಿಗೆ ಸೋಂಕು!
ಅಮೆರಿಕದಲ್ಲಿ ಕೊರೋನಾ ಮಹಾಮಾರಿ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ದಿನಂಪ್ರತಿ 1000ಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದು ಸಾವಿನ ಸಂಖ್ಯೆ 40 ಸಾವಿರ ಗಡಿ ದಾಟಿದೆ.

ಕೊರೋನಾ ವೈರಸ್: ಪರಿಹಾರ ಕಾರ್ಯಗಳಿಗಾಗಿ ಬ್ಯಾಟ್ ಹರಾಜು ಹಾಕಿದ ಮುಷ್ಫಿಕರ್
ಬಾಂಗ್ಲಾದೇಶದ ಸ್ಟಾರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಂ ಕೊರೊನಾ ಪರಿಹಾರ ಕಾರ್ಯಾಚರಣೆಗಾಗಿ ತಮ್ಮ ಬ್ಯಾಟ್ ಅನ್ನು ಹರಾಜು ಹಾಕಲಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 34 ಬಲಿ, 1,334 ಮಂದಿಗೆ ಸೋಂಕು, 17 ಸಾವಿರ ದಾಟಿದ ಸೋಂಕು!
ಕೊರೋನಾ ಮಹಾಮಾರಿ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 1,334 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 34 ಮಂದಿ ಬಲಿಯಾಗಿದ್ದಾರೆ.

ಕೋವಿಡ್-19: 'ಮನೆಯೇ ಹೊಸ ಕಚೇರಿ'- ಪ್ರಧಾನಿ ನರೇಂದ್ರ ಮೋದಿ
ಮಹಾಮಾರಿ ಕೊರೋನಾ ವೈರಾಣು ಸೋಂಕಿನ ಬಿಕ್ಕಟ್ಟು ಎಲ್ಲರನ್ನೂ ಸಮನಾಗಿ ಬಾಧಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರು: ಕೊರೋನಾ ಹಾಟ್ ಸ್ಪಾಟ್ ಪಾದರಾಯನಪುರದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಕಿತ್ತು ಹಾಕಿ ನೂರಾರು ಮಂದಿ ದಾಂಧಲೆ
ಬೆಂಗಳೂರಿನ ಪಾದಾರಾಯನಪುರ ಕೊರೋನಾ ಹಾಟ್ ಸ್ಪಾಟ್ ಆಗಿದ್ದು ಸೀಲ್ ಡೌನ್ ಮಾಡಲಾಗಿತ್ತು. ಆದರೆ ಇದೀಗ ಅಲ್ಲಿನ ಜನರು ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿ ರಸ್ತೆಗಿಳಿದು ಸಿಕ್ಕ ಸಿಕ್ಕಿದ್ದನ್ನೆಲ್ಲಾ ಹೊಡೆದು ದಾಂಧಲೆ ನಡೆಸಿದ್ದಾರೆ.

ಕರ್ನಾಟಕಕ್ಕೆ ಕೊಂಚ ಕೊರೋನಾ ರಿಲೀಫ್: ಕಳೆದ 24 ಗಂಟೆಯಲ್ಲಿ 2 ಸಾವು, ಕೇವಲ 6 ಹೊಸ ಪ್ರಕರಣ ಮಾತ್ರ ಪತ್ತೆ!
ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಕೇವಲ 6 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ.

