coronavirus

ರಾಜ್ಯದಲ್ಲಿ ಕೊರೋನಾಗೆ 17 ಬಲಿ, ಇಂದು ದಾಖಲೆಯ ಅತೀ ಕಡಿಮೆ 2,106 ಸೋಂಕು ಪತ್ತೆ!
ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಶುಕ್ರವಾರ 2,106 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,57,928ಕ್ಕೆ ಏರಿಕೆಯಾಗಿದೆ.

ಮೆಗಾಸ್ಟಾರ್ ಚಿರುಗೆ ಕೊರೊನಾ ಸೋಂಕು ತಗಲಿಯೇ ಇಲ್ಲ; ದೋಷಪೂರಿತ ಆರ್ಟಿಪಿಸಿಆರ್ ಕಿಟ್ನಿಂದ ಅವಾಂತರ..!
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ನಿಜಕ್ಕೂ ಇದು ಸಿಹಿ ಸುದ್ದಿ. ತಮಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಚಿರಂಜೀವಿ ಖುದ್ದು ಟ್ವೀಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಕೋವಿಡ್-19: ಕರ್ನಾಟಕದಲ್ಲಿ ಇಂದು 2,584 ಪ್ರಕರಣ ಪತ್ತೆ, 2,881 ಡಿಸ್ಚಾರ್ಜ್, 23 ಬಲಿ!
ರಾಜ್ಯದಲ್ಲಿ ಇಂದು 2,584 ಕೊರೋನಾ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 8.53 ಲಕ್ಷಕ್ಕೆ ಏರಿಕೆಯಾಗಿದೆ.

ಸ್ಪುಟ್ನಿಕ್ ವಿ ಲಸಿಕೆ ಕೋವಿಡ್ ವಿರುದ್ಧ ಶೇ.92 ರಷ್ಟು ಪರಿಣಾಮಕಾರಿ: ರಷ್ಯಾ
ಮೊದಲ ಮಧ್ಯಂತರ ವಿಶ್ಲೇಷಣೆಯ ಪ್ರಕಾರವಾಗಿ ತಾನು ಅಭಿವೃದ್ಧಿಪಡಿಸಿದ ಲಸಿಕೆ ಸ್ಪುಟ್ನಿಕ್ ವಿ ಕೋವಿಡ್ ನಿಂದ ಜನರನ್ನು ರಕ್ಷಿಸುವಲ್ಲಿ ಶೇಕಡಾ 92 ರಷ್ಟು ಪರಿಣಾಮಕಾರಿ ಎಂದು ರಷ್ಯಾ ಬುಧವಾರ ಹೇಳಿದೆ.

ಜೈವಿಕ ಸುರಕ್ಷತಾ ವಾತಾವರಣದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ: ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಜೈವಿಕ ಸುರಕ್ಷತೆ ವಾತಾವರಣ ಆಟಗಾರರ ಮೇಲೆ ಉಂಟುಮಾಡುವ ಮಾನಸಿಕ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಂತಹ ವಾತಾವರಣದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2 ತಿಂಗಳ ಬಳಿಕ ರಾಜ್ಯದಲ್ಲಿ ದಾಖಲೆಯ ಅತೀ ಕಡಿಮೆ ಕೊರೋನಾ ಪ್ರಕರಣ ಪತ್ತೆ, 8 ಲಕ್ಷ ದಾಟಿದ ಚೇತರಿಕೆ!
ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಇನ್ನಷ್ಟು ಕಡಿಮೆಯಾಗಿದ್ದು ಇಂದು ಬೆಂಗಳೂರಿನಲ್ಲಿ 978 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 1,963 ಕೊರೋನಾ ಪ್ರಕರಣ ಪತ್ತೆಯಾಗಿದೆ.

ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೋವಿಡ್ ನಿಂದ ಗುಣಮುಖ
ತಾನು ಕೊರೋನಾ ನೆಗೆಟಿವ್ ವರದಿ ಪಡೆದಿದ್ದೇನೆ ಹಾಗೂ ಮುಂದಿನ ವಾರದಿಂದ ಮತ್ತೆ ಕಚೇರಿ ಕೆಲಸಗಳಲ್ಲಿ ಸಕ್ರಿಯವಾಗಿತ್ತೇನೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ರಾಜ್ಯದಲ್ಲಿ ಇಂದು ಹೊಸದಾಗಿ 2,740 ಕೊರೋನಾ ಪ್ರಕರಣ ಪತ್ತೆ; ಚೇತರಿಕೆ ಪ್ರಮಾಣ ಇಳಿಕೆ
ರಾಜ್ಯದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಕಡಿಮೆಯಾಗುತ್ತಿದ್ದು ಇಂದು 2,360 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನು ಇಂದು 2,740 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 8,46,887ಕ್ಕೆ ಏರಿಕೆಯಾಗಿದೆ.

35 ದಿನಗಳಿಂದೀಚೆಗೆ ಹೊಸ ಕೊರೊನಾ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳೇ ಅಧಿಕ
ಕಳೆದ ಐದು ವಾರಗಳಿಂದೀಚೆಗೆ ಇದೇ ಪ್ರವೃತ್ತಿ ಮುಂದುವರಿದಿದೆ ಎಂದು ವಿಶ್ಲೇಷಿಸಲಾಗಿದೆ.ಈ ಅಂಶ ಅತ್ಯಂತ ಮಹತ್ವದ ಪಾತ್ರ ವಹಿಸಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ 5.16ಲಕ್ಷಕ್ಕೆ ಇಳಿಕೆಯಾಗಿದೆ.

